Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಸಹಕಾರಿ ಸಂಘಗಳು ರೈತರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದೆ

ಬಂಟ್ವಾಳ: ದ.ಕ.ಜಿಲ್ಲೆಯಲ್ಲಿ ರೈತರ ಬೆನ್ನೆಲುಬಾಗಿ, ರೈತರಿಗೆ ಆತ್ಮವಿಶ್ವಾಸವನ್ನು ತುಂಬುವ ಮೂಲಕ ಪ್ರಯೋಗಶೀಲ ಚಿಂತನೆಯೊಂದಿಗೆ ಬದುಕು ಸಾಗಿಸುವ ಕೆಲಸವನ್ನು ಸಹಕಾರಿ ಸಂಘಗಳು ಮಾಡಿದೆ, ಹಾಗಾಗಿಯೇ ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ಲಾಭದಾಯಕವಾಗಿ ಬೆಳೆಯುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ಅವರು ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ ನಿ. ಇದರ 2ನೇ ಶಾಖೆಯನ್ನು ತುಂಬೆಯಲ್ಲಿ ನೂತನವಾಗಿ ಉದ್ಘಾಟಿಸಿ ಮಾತನಾಡಿದರು.

3

1

ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ಪಾರದರ್ಶಕ ಮತ್ತು ಮಾದರಿಯಾಗಿ ಕೆಲಸ ಮಾಡಿದ ಪರಿಣಾಮವಾಗಿ ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ 2ನೇ ಶಾಖೆಯನ್ನು ಸ್ಥಾಪನೆ ಮಾಡಲು ಅನುಕೂಲವಾಯಿತು ಎಂದರು. ಸಹಾಕಾರಿ ಚಳವಳಿ ರಂಗ ಪ್ರಾರಂಭಗೊಂಡಾಗ ದ.ಕ.ಜಿಲ್ಲೆ ಸಹಕಾರಿಯ ಕಾಶಿಯಾಗಿ ಪ್ರತಿಕ್ರಿಯೆ ನೀಡಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಂಬೆ ಗ್ರಾ.ಪಂ.ಅಧ್ಯಕ್ಷೆ ಹೇಮಲತಾ ಜಿ.ಪೂಜಾರಿ ವಹಿಸಿದ್ದರು. ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಪ್ರತಾಪ್‌ಸಿಂಹ ನಾಯಕ್, ಮಂಗಳೂರು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಸಹಕಾರಿ ಸಂಘಗಳ ಅಭಿವೃದ್ದಿ ಅಧಿಕಾರಿ ಜನಾರ್ಧನ, ತುಂಬೆ ಗ್ರಾ.ಪಂ.ಉಪಾಧ್ಯಕ್ಷ ಪ್ರವೀಣ್ ತುಂಬೆ, ತುಂಬೆ ಮಾಜಿ ಗ್ರಾ.ಪಂ.ಅಧ್ಯಕ್ಷ ಮಹಮ್ಮದ್ ವಳವೂರು ಮುಖ್ಯ ಅತಿಥಿಗಳಾಗಿದ್ದರು. ಉಪಾಧ್ಯಕ್ಷೆ ಹರ್ಷಿಣಿ ನಿರ್ದೇಶಕರುಗಳಾದ ಪ್ರಭಾಕರ ಶೆಟ್ಟಿ, ಪಿ.ಸುಬ್ರಹ್ಮಣ್ಯ ರಾವ್, ರಾಮ ನಾಯ್ಕ, ಶಶಿಕಲಾ ಉಡುಪ, ರತ್ನ, ಪದ್ಮನಾಭ ಕೆ.ಕಿದೆಬೆಟ್ಟು, ಸುಂದರ ಭಂಡಾರಿ, ಪಿ.ವೆಂಕಟೇಶ ನಾವುಡ, ಜ್ಯಾನೇಶ್ವರ ಪ್ರಭು ಮತ್ತು ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು. ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ ನಿ. ಇದರ ಅಧ್ಯಕ್ಷ ಕೆ.ರವೀಂದ್ರ ಕಂಬಳಿ ಸ್ವಾಗತಿಸಿ, ನಿರ್ದೇಶಕ ಬಿ.ಟಿ.ನಾರಾಯಣ ಭಟ್ ವಂದಿಸಿದರು. ಕಾರ್ಯದರ್ಶಿ ಯು.ಧರ್ಮಪಾಲ ಭಂಡಾರಿ ವರದಿ ವಾಚಿಸಿದರು. ದಿನೇಶ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin