ಬಂಟ್ವಾಳ: ಸಾಮಾಜಿಕ ಜಾಲಾತಾಣದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿಗೆ ಅವಮಾನಿಸಿದ ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿ, ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ಕ್ಷೇತ್ರದಿಂದ ಕಟೀಲು ಕ್ಷೇತ್ರದವರೆಗೆ ಅಮ್ಮನೆಡೆಗೆ ನಮ್ಮನಡಿಗೆ ಬೃಹತ್ ಪಾದಯಾತ್ರೆ ಸೆ. 11 ರಂದು ನಡೆಯಿತು. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಬೆಳಿಗ್ಗೆ ಎಲ್ಲಾ ಭಕ್ತರು ಬೆಳಿಗ್ಗೆ 6.30 ಕ್ಕೆ ಪೊಳಲಿ ಕ್ಷೇತ್ರದಲ್ಲಿ ಸೇರಿ ಅಲ್ಲಿನ ಪ್ರಧಾನ ಅರ್ಚಕರು ಅಂತಹ ಸಮಾಜ ಘಾತುಕ ಶಕ್ತಿಗಳಿಗೆ ತಕ್ಕ ಶಿಕ್ಷೆಯಾಗಲಿ ಎಂದು ವಿಶೇಷ ಸಾಮೂಹಿಕ ಪ್ರಾರ್ಥನೆಗೈದು, ಬಳಿಕ ಪಾದಯಾತ್ರೆ ಆರಂಭಗೊಂಡಿತು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ ಕಟೀಲು ದೇವಿಗೆ ಅವ್ಯಾಚ್ಚ ಶಬ್ದಗಳಿಂದ ಬೈದು ನಿಂದಿಸಿದ ನೀಚ ವ್ಯಕ್ತಿಗಳಿಗೆ ತಕ್ಕ ಶಾಸ್ತಿಯಾಗಬೇಕು, ಇಂತಹ ಘಟನೆಗಳು ದೇಶದಲ್ಲಿ ಎಲ್ಲಿಯೂ ಮರುಕಳಿಸದಂತೆ, ಎಲ್ಲರೂ ಸಾಮರಸ್ಯದ ಬದುಕು ನೆಡಸುವಂತಾಗಬೇಕು ಅದಕ್ಕಾಗಿ ಈ ಮಹತ್ಕಾರ್ಯ ಮಾಡಲಾಗುತ್ತಿದೆ ಎಂದರು.
ಕಲ್ಲಡ್ಕ ಡಾ| ಪ್ರಭಾಕರ ಭಟ್ ಮಾತನಾಡಿ, ಹಿಂದೂ ಭಾವನೆಗಳನ್ನು ಕೆರಳಿಸಿ ಹಿಂದೂಗಳ ಶಾಂತಿಯ ಭಾವನೆಯನ್ನು ದೌರ್ಬಲ್ಯ ಅಂದು ತಿಳಿದುಕೊಳ್ಳುವುದು ಬೇಡ ಎಂದು ಹೇಳಿದರು. ಬೇರೆ ಬೇರೆ ದೇಶಗಳಿಂದ ಭಾರತಕ್ಕೆ ಬಂದ ಮತವಾದಿಗಳು ಹಿಂದೂ ಸಮಾಜದ ಮೇಲೆ ಆಕ್ರಮಣ ಮಾಡುತ್ತಾರೆ, ರಾಜಕೀಯ ನಾಯಕರು ಅವರಿಗೆ ಬೆಂಬಲ ನೀಡುತ್ತಾರೆ. ಹಿಂದೂ ಸಮಾಜ ಬದುಕದಿದ್ದರೆ ಈ ದೇಶ ಉಳಿಯುವುದಿಲ್ಲ ಎಂದರು. ನಿರಂತರವಾಗಿ ನಾವು ಪೂಜಿಸುವ ಗೋವು ಹತ್ಯೆ, ಮುಗ್ಧ ಹೆಣ್ಣು ಮಕ್ಕಳನ್ನು ಪ್ರೀತಿ ಮೋಸದ ಹೆಸರಿನಲ್ಲಿ ಮತಾಂತರ ಮಾಡುವುದು, ದೇವರ ಮೆರವಣಿಗೆಗೆ ಅಡ್ಡಿ ಮಾಡುವುದು ಈಗ ದೇವರ ಮೇಲೆ ಅವಮಾನ, ಅಪಮಾನ ಮಾಡಲು ಹೊರಟಿದ್ದಾರೆ ಇದನ್ನು ಕ್ಷಮಿಸಲು ಸಾಧ್ಯವಿಲ್ಲ. ಈ ದೇಶದಲ್ಲಿ ಬದುಕಬೇಕಾದರೆ ಎಲ್ಲರೂ ಒಟ್ಟಾಗಿ ಬದುಕಬೇಕು ಇದು ಶಾಂತ ರೀತಿಯ ಎಚ್ಚರಿಕೆಯ ಹೋರಾಟ ಎಂದರು.
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ಹಿಂದೂ ಸಮಾಜದ ಮೇಲೆ ಅಘಾತವುಂಟಾಗಿದೆ ಹಾಗಾಗಿ ನಾನೊಬ್ಬ ಹಿಂದೂ ಆಗಿ ಯಾವಾಗಲೂ ಹೋರಾಟಕ್ಕೆ ಸಿದ್ದವಾಗಿದ್ದೇನೆ, ಇದು ಈ ಕೃತ್ಯ ಮಾಡಿದ ವ್ಯಕ್ತಿಗಳಿಗೆ, ಸರಕಾರಕ್ಕೆ ಮತ್ತು ಪೋಲಿಸರಿಗೆ ಎಚ್ಚರಿಕೆಯನ್ನು ಕೊಡುವ ಶಾಂತಿಯ ಹೋರಾಟ, ಈ ಘಟನೆಗೆ ಕಾರಣವಾದವರನ್ನು ಶೀಘ್ರವೇ ಬಂಧಿಸದಿದ್ದರೆ ಮತ್ತು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನೆಡದರೆ ಈ ದೇಶದಲ್ಲಿ ಅಶಾಂತಿ ಉಂಟಾಗುತ್ತೆ ಎನ್ನುವ ಎಚ್ಚರಿಕೆಯನ್ನು ನೀಡಿದರು.
ಸಮಿತಿಯ ಅಧ್ಯಕ್ಷ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಮಾತನಾಡಿ ಆರೋಪಿಗೆ ದೇವಿಯೇ ಶಿಕ್ಷೆಯನ್ನು ನೀಡಬೇಕೆಂಬ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗುತ್ತದೆ ಎಂದರು.
ಸ್ವಾಮೀ ವಿವೇಕಾಚೈತನ್ಯಾನಂದ ರಾಮಕೃಷ್ಣ ತಪೋವನ ಪೋಳಲಿ, ಸಮಿತಿ ಗೌರವಾಧ್ಯಕ್ಷ ಬಿ.ನಾಗರಾಜ ಶೆಟ್ಟಿ, ಸಮಿತಿಯ ಪ್ರಧಾನ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್ , ಅಣ್ಣಯ್ಯ ಕುಲಾಲ್, ಮಾಜಿ ಶಾಸಕ ರುಕ್ಮಯ ಪೂಜಾರಿ, ಸುಲೋಚನಾ ಭಟ್, ಜಗದೀಶ ಅಧಿಕಾರಿ, ಹಿಂದೂ ಜಾಗರಣ ವೇದಿಕೆಯ ಪ್ರಮುಖ ರವಿರಾಜ್ ಬಿ.ಸಿ.ರೋಡು, ದೇವಸ್ಥಾನದ ಅರ್ಚಕರಾದ ಪರಮೇಶ್ವರ ಭಟ್, ಮಾದವ ಭಟ್, ದೇವಸ್ಥಾನದ ಮೋಕ್ತೇಸರ ಉಳಿಪಾಡಿಗುತ್ತು ತಾರಾನಾಥ ಆಳ್ವ, ವೆಂಕಟೇಶ್ ನಾವುಡ, ಉದಯಕುಮಾರ್ ರಾವ್ ಬಂಟ್ವಾಳ, ಗೋವಿಂದ ಪ್ರಭು, ದೇವದಾಸ ಶೆಟ್ಟಿ, ರಾಮ್‌ದಾಸ ಬಂಟ್ವಾಳ, ಜಿ,ಆನಂದ, ಸತೀಶ್ ಕುಂಪಲ, ದೇವಿ ಪ್ರಸಾದ್ ಪುನರೂರು, ರಾಧಾಕೃಷ್ಣ ಅಡ್ಯಂತಾಯ, ಶೇಷಪ್ಪ ಕೋಟ್ಯಾನ್, ಕಾಂತಪ್ಪ ಶೆಟ್ಟಿ, ಗಂಗಾದರ ಕೋಟ್ಯಾನ್, ಪವನ್ ಕುಮಾರ್ ಶೆಟ್ಟಿ, ನಂದರಾಮ್ ರೈ, ಸಂದೀಪ್ ಶೆಟ್ಟಿ ಮತ್ತು ಸಾವಿರಾರು ಭಕ್ತರು ಸೇರಿದ್ದರು.
ಜಾತಿ, ಪಕ್ಷ ಭೇದ ಮರೆತು ಚೆಂಡೆ, ಶಂಖ, ಜಾಗಟೆಯ ಮೂಲ ಹರಿಕೀರ್ತನೆ ಮಾಡಿಕೊಂಡು ಕ್ಷೇತ್ರಕ್ಕೆ ತೆರಳಿದರು. ಈ ಪಾದಯಾತ್ರೆಯ ಸಂದರ್ಭದಲ್ಲಿ ಮಧ್ಯೆ ಮಧ್ಯೆ ಸಾವಿರಾರು ಭಕ್ತರು ಸೇರಿಕೊಂಡರು.