ಬಂಟ್ವಾಳ ಬಂಟರ ಸಂಘದ ಹೊಸ ಕಟ್ಟಡ ಉದ್ಘಾಟನೆಗೆ ಮಹಾರಾಷ್ಟ್ರದ ಮಾನ್ಯ ಮುಖ್ಯಮಂತ್ರಿಯವರನ್ನು ಇಂದು ಆಹ್ವಾನಿಸಲಾಯಿತು.
ಬಂಟರ ಸಂಘ, ಬಂಟ್ವಾಳ ತಾಲೂಕು (ರಿ) ವತಿಯಿಂದ ವಳವೂರು ತುಂಬೆಯಲ್ಲಿ ನೂತನ ಹವಾನಿಯಂತ್ರಿತ ‘ಬಂಟವಾಳದ ಬಂಟರ ಭವನ’ ನಿರ್ಮಾಣಗೊಂಡಿದ್ದು ಉದ್ಘಾಟನೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಬಂಟರ ಭವನ ಉದ್ಘಾಟನಾ ಸಮಾರಂಭಕ್ಕೆ ವಿಧ್ಯುಕ್ತವಾಗಿ ಆಹ್ವಾನಿಸಲಾಯಿತು. ಬಂಟವಾಳ ಬಂಟರ ಸಂಘದ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ, ಕಟ್ಟಡ ಗೌರವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟಿಲ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.