ಬಂಟ್ವಾಳ: ಬಿ. ಸಿ. ರೋಡ್ ಹಾಸನ ರಸ್ತೆಯ ಚತುಷ್ಪಥ ಕಾಮಗಾರಿ ಆರಂಭಿಸಲು ಸರಕಾರದ ಅನುಮೋದನೆ ಸಿಕ್ಕಿದ್ದು, ಶೀಘ್ರವೇ ಸರ್ವೆ ಕಾರ್ಯ ಆರಂಭಿಸುವ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲು ವಿಶ್ವಾಸ ವ್ಯಕ್ತಪಡಿಸಿದರು. ಅವರು ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲು, ವಗ್ಗ, ಪುಂಜಾಲಕಟ್ಟೆ, ಪಿಲಾತಬೆಟ್ಟು, ಕಾವಳಪಡೂರು, ಕಾವಳಮೂಡುರು ಗ್ರಾಮಗಳಿಗೆ ಬೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.
ಬಹುತೇಕ ಡಿಸೆಂಬರ್ನಲ್ಲಿ ಚತುಷ್ಪಥ ಕಾಮಗಾರಿಯ ಪ್ರಥಮ ಹಂತದ ಕಾಮಗಾರಿ ನಡೆಯುವ ಬಗ್ಗೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು. ಬಿ.ಸಿ.ರೋಡ್ ಸರ್ವೀಸ್ ರಸ್ತೆಯ ಡಾಮರೀಕರಣ ಕಾರ್ಯ ಮತ್ತು ಬಾಕಿ ಇರುವ ಸರ್ವಿಸ್ ರಸ್ತೆ ಅಗಲೀಕರಣದ ಕೆಲಸ ಕೂಡಾ ಮಾಡಲಾಗುವುದು ಎಂದು ಭರವಸೆ ನೀಡಿದರು. ಇದೇ ಸಂದರ್ಭ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಆಲಿಸಿದ ನಳಿನ್ ಅಧಿಕಾರಿಗಳನ್ನು ಕರೆದು ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಶೀಘ್ರವೇ ಪೂರ್ಣಗೊಳಿಸಬೇಕೆಂದು ಸೂಚಿಸಿದರು.
ಈ ಸಂದರ್ಭ ಸಾಮಜಿಕ ನೇತಾರ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ತಾ.ಅಧ್ಯಕ್ಷ ಜಿ.ಆನಂದ, ಸುಲೋಚನಾ ಜಿ.ಕೆ.ಭಟ್ಟ್, ರಾಮ್‌ದಾಸ್ ಬಂಟ್ವಾಳ್, ದಿನೇಶ್ ಅಮ್ಟೂರು, ತುಂಗಪ್ಪ ಬಂಗೇರ, ಪುರುಷ ಸಾಲಿಯಾನ್, ಆನಂದ ಕುಲಾಲ್, ಶಶಿದರ ಟೈಲರ್ ಮತ್ತಿತತರು ಉಪಸ್ಥಿತರಿದ್ದರು.