ಮಂಗಳೂರಿನಿಂದ ಬೆಂಗಳೂರು ಮೂಲಕ ದೆಹಲಿಗೆ ಹಾಗೂ ಮಂಗಳೂರಿನಿಂದ ಪುಣೆಗೆ ನೇರ ವಿಮಾನ ಯಾನ ಸೇವೆಯನ್ನು ಪ್ರಾರಂಭಿಸುವಂತೆ ಕೇಂದ್ರಕ್ಕೆ ಸಂಸದರು ರಾಜ್ಯ ಸಚಿವರಾದ ಡಾ||ಮಹೇಶ್ ಶರ್ಮ ಇವರಿಗೆ ಮನವಿ ಮಾಡಿದ್ದಾರೆ.
ಮಂಗಳೂರು ಅಭಿವೃದ್ಧಿಯಲ್ಲಿ ರಾಜ್ಯದಲ್ಲೇ ಮುಂಚುಣಿಯಲ್ಲಿದ್ದು ಇಲ್ಲಿನ ಪ್ರವಾಸೋದ್ಯಮ, ಕಲೆ, ಸಂಸ್ಕೃತಿ ಇತಿಹಾಸವು ದೇಶವಿದೇಶಗಳ ಜನರನ್ನು ಆಕರ್ಷಿಸುತ್ತಿದೆ. ಅಲ್ಲದೇ ಮಂಗಳೂರು ಕೈಗಾರಿಕೆಯಲ್ಲೂ ತುಂಬಾ ಮುಂದುವರೆದಿರುತ್ತದೆ. ಪ್ರತೀವರ್ಷ ಸಾವಿರಾರು ಪ್ರವಾಸಿಗರು ಉದ್ಯಮಿಗಳು ಮಂಗಳೂರಿಗೆ ಆಗಮಿಸುತ್ತಿರುತ್ತಾರೆ. ಹೀಗಿದ್ದರೂ ಮಂಗಳೂರಿನಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ನೇರ ವಿಮಾನ ಸಂಪರ್ಕವಿರುವುದಿಲ್ಲ. ಮಂಗಳೂರಿನಿಂದ ಬೆಂಗಳೂರು ಮೂಲಕ ದೆಹಲಿಗೆ ಹಾಗೂ ಮಂಗಳೂರಿನಿಂದ ಪುಣೆಗೆ ವಿಮಾನ ಸಂಚಾರಕ್ಕೆ ಬೇಡಿಕೆಯಿದ್ದು ಈ ಮಾರ್ಗದಲ್ಲಿ ಸರಿಸುಮಾರು ೧೫೦ ರಿಂದ ೧೭೦ ಪ್ರಯಾಣಿಕರು ಸಂಚರಿಸುವ ಸಾಧ್ಯತೆಯಿರುವುದಾಗಿ ಅಂದಾಜಿಸಲಾಗಿದೆ. ಪ್ರವಾಸೋದ್ಯ ಹಾಗೂ ಕೈಗಾರಿಕೆಗಳ ಅಭಿವೃದ್ಧಿಯಿಂದಾಗಿ ಮಂಗಳೂರಿನಿಂದ ರಾಷ್ಟ್ರರಾಜಧಾನಿ ದೆಹಲಿಗೆ ಸಂಚರಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ವೃದ್ಧಿಯಾಗುತ್ತಿದೆ.
ಆದುದರಿಂದ ಮಂಗಳೂರಿನಿಂದ ಬೆಂಗಳೂರು ಮೂಲಕ ದೆಹಲಿಗೆ ಹಾಗೂ ಮಂಗಳೂರಿನಿಂದ ಪುಣೆಗೆ ವಿಮಾನ ಸಂಚಾರ ಪ್ರಾರಂಭಿಸುವಂತೆ ದಕ್ಷಿಣ ಕನ್ನಡ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ರವರು ಕೇಂದ್ರ ಸಾಂಸ್ಕೃತಿಕ ಹಾಗೂ ಪ್ರವಾಸೋದ್ಯಮ ರಾಜ್ಯ ಸಚಿವರಾದ ಡಾ||ಮಹೇಶ್ ಶರ್ಮ ಇವರಿಗೆ ಮನವಿ ಮಾಡಿರುತ್ತಾರೆ.