Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಮುತ್ತೂರು ಕೆಸರ್‌ಡೊಂಜಿ ದಿನ

ಬಂಟ್ವಾಳ : ದಿ| ಮೋಹನ್ ಅವರ ಸ್ಮರಣಾರ್ಥವಾಗಿ ವಿವಿಧ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿ ಕ್ರೀಡಾಪಟುಗಳನ್ನು ಮುತ್ತೂರು ಅಮರಜ್ಯೋತಿ ಫ್ರೆಂಡ್ಸ್ ಸರ್ಕಲ್ ಇದರ ಆಶ್ರಯದಲ್ಲಿ ತೃತೀಯ ವರ್ಷದ ಅಮರಜ್ಯೋತಿ ಕ್ರೀಡಾಕೂಟ ಪ್ರಯುಕ್ತ ನಡೆದ ಕೆಸರ್‌ಡೊಂಜಿ ದಿನ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

10

ವೇದಿಕೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪಾಡಿಗುತ್ತು ದ.ಕ.ಜಿ.ಪಂ. ಉಪಾದ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಡಾ. ಭರತ್ ಶೆಟ್ಟಿ, ಶುಭಲಕ್ಷ್ಮೀ ಟ್ರಾವೆಲ್ಸ್ ಮಾಲಕ ಭುವನೇಶ್ ಪಚ್ಚಿನಡ್ಕ, ಕೃಷ್ಣರಾಜ ಮಾರ್ಲ ಮುತ್ತೂರು, ಅಮರ ಜ್ಯೋತಿ ಫ್ರೆಂಡ್ ಕ್ಲಬ್‌ನ ಸಂಚಾಲಕ ಪವನ್‌ಕುಮಾರ್ ಶೆಟ್ಟಿ, ಪದಾಧಿಕಾರಿಗಳಾದ ನಿತ್ಯಾನಂದ ಕೆ, ಸುಧೀರ್ ಕುಲಾಲ್, ಶಂಕರ ಶೆಟ್ಟಿ ದೋಣಿಕರಿಯ , ಶಿವಾನಂದ ಕುಲಾಲ್ ಮತ್ತು ಕುಸುಮಾಕರ ಶೆಟ್ಟಿ , ಯೋಗೀಶ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.

Highslide for Wordpress Plugin