ಮಂಗಳೂರು: ಸಮಯ ಹೇಗೆ ನಿರಾಕಾರವೋ ಹಾಗೆಯೇ ದೇವರು ಕೂಡ ನಿರಾಕಾರ. ಗಣಪತಿ ಮೂರ್ತಿ ಒಂದು ಸಾಧನ. ಮೂರ್ತಿಯ ಹಿಂದೆ ಇರುವ ತಣ್ತೀಗಳು, ಮೌಲ್ಯಗಳು ನಮಗೆ ಅನ್ವಯ ಅದಕ್ಕೆ ಚ್ಯುತಿ ಬಾರದ ರೀತಿಯಲ್ಲಿ ನಾವು ಸನಾತನ ಸಂಸ್ಕೃತಿಯನ್ನು ಉಳಿಸೋಣ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ನಗರದ ನೆಹರೂ ಮೈದಾನದಲ್ಲಿ ಹಿಂದೂ ಯುವ ಸೇನಾ ಆಶ್ರಯದ 24ನೇ ವರ್ಷದ ಮಂಗಳೂರು ಗಣೇಶೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗಣೇಶೋತ್ಸವಗಳು ಭವನದ ಬೆಳಕಾಗದೆ, ಭುವನದ ಬೆಳಕಾಗಲಿ. ಆ ಮೂಲಕ ಹಿಂದೂ ಸಮಾಜಕ್ಕೆ ಬರುತ್ತಿರುವ ಕಂಟಕಗಳು ನಿವಾರಣೆಯಾಗಲಿ ಎಂದರು.
ಕರಾವಳಿ ಶಿಕ್ಷಣ ಸಂಸ್ಥೆಯ ಸ್ಥಾಪಕಾಧ್ಯಕ್ಷ ಎಸ್. ಗಣೇಶ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಕ್ರೆಡಾೖ ಮಾಜಿ ಅಧ್ಯಕ್ಷ ಪುಷ್ಪರಾಜ್ ಜೈನ್ ಮುಖ್ಯ ಅತಿಥಿಯಾಗಿದ್ದರು. ಮಂಗಳೂರು ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಶಿಕಾಂತ್ ನಾಗ್ವೇಕರ್, ಗೌರವಾಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಚೌಟ, ಹಿಂದೂ ಯುವ ಸೇನಾ ಅಧ್ಯಕ್ಷ ಯಶೋಧರ ಚೌಟ, ಪ್ರಧಾನ ಕಾರ್ಯದರ್ಶಿ ಪದ್ಮನಾಭ ನಾವೂರು, ಗಣೇಶೋತ್ಸವ ಸಮಿತಿ ಉಪಾಧ್ಯಕ್ಷರಾದ ಉಮೇಶ್ ಪೈ, ಕೊರಗಪ್ಪ ಶೆಟ್ಟಿ ಆಕಾಶಭವನ, ವಸಂತ್ ಉರ್ವಾಸ್ಟೋರ್, ಹಿಂದೂ ಯುವ ಸೇನಾ ಜಿಲ್ಲಾಧ್ಯಕ್ಷ ವೀರಪ್ಪ ಮೂಡುಶೆಡ್ಡೆ ಉಪಸ್ಥಿತರಿದ್ದರು.
ನ್ಯಾಯವಾದಿ ದಿನಕರ ಶೆಟ್ಟಿ ಸ್ವಾಗತಿಸಿದರು. ಪ್ರವೀಣ್ ಎಸ್. ಕುಂಪಲ ಕಾರ್ಯಕ್ರಮ ನಿರೂಪಿಸಿದರು.
Source : Udayavani.com