ಪ್ರದೇಶಾಭಿವದ್ಧಿ ನಿಧಿಯನ್ನು ಬಳಸಿಕೊಳ್ಳುವಲ್ಲಿ ರಾಜ್ಯದಲ್ಲಿ ನಾನು ಪ್ರಥಮ ಸ್ಥಾನದಲ್ಲಿರುವುದು ಕಾರ್ಯಕರ್ತರ ಪ್ರೀತಿ ವಿಶ್ವಾಸಗಳಿಂದ ಮಾತ್ರ ಸಾಧ್ಯವಾಗಿದೆ. ನನ್ನ ಚೊಚ್ಚಲ ಅವಕಾಶದಲ್ಲಿಯೇ, ಹಿರಿಯರ ಮಾರ್ಗದರ್ಶನ, ಸಹಕಾರದಿಂದ ಕ್ಷೇತ್ರದ ಜನತೆಯ ಸವಾಲುಗಳನ್ನು ಲೋಕಸಭೆಯಲ್ಲಿ ಪ್ರಭಾವಿಯಾಗಿ ಮಂಡಿಸಿ, ಚರ್ಚೆಯಲ್ಲಿ ಭಾಗವಹಿಸಿದ್ದೇನೆ.
ಜಿಲ್ಲೆಯ ರೈತರ ಸಮಸ್ಯೆ, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಸಮಸ್ಯೆ, ಅಡಿಕೆ ಬೆಳೆಗಾರರ ಆತಂಕ, ತುಳುಭಾಷೆಗೆ ಸ್ಥಾನಮಾನ ಸೇರಿದಂತೆ ಹಲವಾರು ಪ್ರಮುಖ ವಿಷಯಗಳನ್ನು ಲೋಕಸಭೆಯಲ್ಲಿ ಮಂಡಿಸಿ ಚರ್ಚೆಯಲ್ಲಿ ಭಾಗವಹಿಸಿ ಜಿಲ್ಲೆಯ ಮತದಾರರ ಹಕ್ಕನ್ನು ಸಮರ್ಥವಾಗಿ ಪ್ರಸ್ತಾಪಿಸಿದ್ದೇನೆ. ಮುಂದಿನ ಅವಕಾಶದಲ್ಲಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಡಿ ಜಿಲ್ಲೆಯ ಅಭಿವೃದ್ಧಿಗೆ ಯೋಜನೆಗಳ ಸಾಕಾರಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಲೋಕಸಭಾ ಕ್ಷೇತ್ರ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಕಾರ್ಯಕರ್ತರನ್ನು ಉದ್ದೇಶಿಸಿ ಉರ್ವ ಪರಿಸರದಲ್ಲಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದರು ಈ ಸಮಯಲ್ಲಿ, ಪ್ರಮುಖರಾದ ಮೋನಪ್ಪ ಭಂಡಾರಿ, ನಿತಿನ್ ಕುಮಾರ್ ಯೋಗೀಶ್ ಭಟ್ಟ್ , ವೇದವ್ಯಾಸಕಾಮತ್, ಜಗದೀಶ್ ಶೆಟ್ಟಿ , ರವಿಶಂಕರ ಮಿಜಾರ್ ಮತ್ತು ಸ್ಥಳಿಯ ಕಾರ್ಯಕರ್ತರಾದ ಅರುಣ್, ಭರತ್,ಕಿಶೋರ್,ಆಶಾಜಗದೀಶ್ ಮುಂತಾದವರು ಉಪಸ್ಥಿತರಿದ್ದರು