Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಸಾಮರಸ್ಯದ ಸಮಾಜಕ್ಕೆ ಬದ್ಧ : ನಳಿನ್

ಬಂಟ್ವಾಳ : ದ.ಕ.ಜಿಲ್ಲೆಯಲ್ಲಿ ಬಿಜೆಪಿಯ ಆಯ್ಕೆಯೊಂದಿಗೆ ಮಂಗಳೂರನ್ನು ಪ್ರವಾಸೋದ್ಯಮ ಅಧಾರದಲ್ಲಿ ಅಭಿವೃದ್ಧಿಪರ ಕೇಂದ್ರವನ್ನಾಗಿ ಪರಿವರ್ತಿಸುವುದು, ಯುವಕರಿಗೆ ಉದ್ಯೋಗ, ಸ್ವಾವಲಂಬಿ ಬದುಕು, ನೆಮ್ಮದಿ, ಸಾಮರಸ್ಯದ ಸಮಾಜವನ್ನು ನೀಡಲು ಬದ್ಧ ಎಂದು ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಗುರುವಾರ ರಾತ್ರಿ ಮಂಚಿ, ಸಾಲೆತ್ತೂರು ಪರಿಸರದಲ್ಲಿ ಮತಯಾಚನೆಯ ಬಳಿಕ ನಡೆದ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ವಿವಿಧ ಮಾಧ್ಯಮ ಸಮೀಕ್ಷೆಗಳು ದೇಶದಲ್ಲಿ ಸಮಗ್ರ ಸಾಧನೆ ಮಾಡಿದ ಅತ್ಯುತ್ತಮ ಸಂಸದರ ಪೈಕಿ ತಾನು ೬ನೇ ಸ್ಥಾನದಲ್ಲಿದ್ದು, ಸಂಸದರ ನಿಧಿ ಬಳಕೆಯಲ್ಲೂ ಮೊದಲ ಸ್ಥಾನ ನೀಡಿದೆ. ರಾಜಕೀಯವಾಗಿ ಅನುಭವಿಲ್ಲದಿದ್ದರೂ ಪಕ್ಷದ ವರಿಷ್ಠರ ಹಾಗೂ ಕಾರ್ಯಕರ್ತರ ಮತ್ತು ಜನರ ಆಶೀರ್ವಾದದಿಂದ ನೇರವಾಗಿ ಲೋಕಸಭೆ ಪ್ರವೇಶಿಸಿ ಇಂದು ದೇಶದ ಸಂಸದರ ಪೈಕಿ ಗರಿಷ್ಠ ಸ್ಥಾನ ಗಳಿಸಿ ಪ್ರಾಮಾಣಿಕ, ಆದರ್ಶ ರಾಜಕಾರಣಿಯಾಗಿ ಆರಿಸಿದ ಜನತೆಗೆ ಸೇವೆ ಸಲ್ಲಿಸಿದ್ದೇನೆ ಎಂದರು.

ಪರಿಸರ ಹಾನಿಯಾಗದಂತೆ ಉದ್ಯೋಗ ಸೃಷ್ಟಿ ಮೊದಲಾದ ಕನಸುಗಳ ಸಾಕಾರಗೊಳಿಸಲು ಬಿಜೆಪಿಯನ್ನು ಗೆಲ್ಲಿಸಿ ನರೇಂದ್ರ ಮೋದಿಯನ್ನು ಪ್ರದಾನಿಯನ್ನಾಗಿಸಲು ಕಾರ್ಯಕರ್ತರು ಶ್ರಮಿಸುವಂತೆ ಕರೆ ನೀಡಿದರು.

ವಿ.ಪ.ಸದಸ್ಯ ಮೋನಪ್ಪ ಭಂಡಾರಿ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಬಿಜೆಪಿ ಮುಖಂಡರಾದ ಉಳಿಪ್ಪಾಡಿಗುತ್ತು ರಾಜೇಶ್ ನಾಯ್ಕ್, ಪುರುಷ ಎನ್.ಸಾಲ್ಯಾನ್, ಸುಲೋಚನಾ ಜಿ.ಕೆ.ಭಟ್, ಕೈಯೂರು ನಾರಾಯಣ ಭಟ್ ಹಾಗೂ ಪಕ್ಷದ ಸ್ಥಳೀಯ ಮುಖಂಡರು ಹಾಜರಿದ್ದರು. ಇದಕ್ಕೂ ಮೊದಲು ನಳಿನ್ ಕುಮಾರ್‌ರವರು ಪಿಲಾತಬೆಟ್ಟು ಗ್ರಾಮದ ಮೂಜೆ, ನೈನಾಡು, ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡರು. ವಾಮದಪದವಿನ ಕಾಶ್ಯೂಪ್ಯಾಕ್ಟರಿಗೆ ತೆರಳಿ ನೌಕರರಲ್ಲಿ ಮತಯಾಚಿಸಿದರು. ಕಲ್ಲಡ್ಕದಲ್ಲೂ ಮತ ಯಾಚನೆಗೈದು ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದರು.

Highslide for Wordpress Plugin