ಕಾಣಿಯೂರು: ಕಾಣಿಯೂರು ನ್ಯೂ ಮಾಡೇಲ್ ಕಾಲೇಜು ಪ್ರಾರಂಭಗೊಂಡು 4 ವರ್ಷ ಕಳೆದರೂ ಅಧಿಕಾರಿಗಳ ಅಸಡ್ಡೆಯಿಂದ ನಿವೇಶನ ಮಂಜೂರುಗೊಳ್ಳದೇ ಇರುವುದನ್ನು ಪ್ರತಿಭಟಿಸಿ ಕಾಣಿಯೂರು ಪೇಟೆಯಲ್ಲಿ ಡಿ 14 ರಂದು ರಸ್ತೆತಡೆ ಮತ್ತು ಪ್ರತಿಭಟನೆ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ಕಾಂಗ್ರೇಸ್‌ಗರಿಗೆ ಮನವಿ ಮಾಡುತ್ತಾ ಶಿಕ್ಷಣದಲ್ಲಿ ರಾಜಕೀಯ ತರಬೇಡಿ. ಕಾನೂನಿನ ರೀತಿಯಲ್ಲಿ ಕೆಲಸ ಮಾಡುತ್ತಿದ್ದ ಜಿಲ್ಲಾಧಿಕಾರಿಗಳನ್ನು ಕಾಂಗ್ರೇಸ್‌ನವರು ಓಡಿಸಿ ಬಿಟ್ಟಿದ್ದಾರೆ. ಇದು ನ್ಯೂ ಮಾಡೇಲ್ ಕಾಲೇಜು ಆದಕಾರಣ ಇದಕ್ಕೆ 20 ಎಕ್ರೆ ಜಾಗದ ಅವಶ್ಯಕತೆ ಇದ್ದ ಕಾರಣ ಬೆಳಂದೂರು ಗ್ರಾಮದ ಸರ್ವೆ ನಂ ೯೯ರಲ್ಲಿರುವ ಜಾಗವೇ ಸೂಕ್ತ, ಯಾವುದೇ ಕಾರಣಕ್ಕೂ ಕಾಲೇಜು ಬೇರೆ ಕಡೆಗೆ ಸ್ಥಳಾಂತರಗೊಳ್ಳಬಾರದು, ಹೋರಾಟದಲ್ಲಿ ನಿಮ್ಮ ಜೊತೆ ಸದಾ ಇದ್ದೇನೆ ಎಂದು ಹೇಳಿದರು. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಬಂದ ನಂತರ ಇವತ್ತು ರೈತರಿಗೆ ಮರಣ ಶಾಸನ ಬರೆಯುತ್ತಿದೆ. ನಮ್ಮ ಪೂಜೆ ಪುರಸ್ಕಾರದಲ್ಲಿ ಅಗ್ರಸ್ಥಾನವನ್ನು ಪಡೆಯುತ್ತಿದ್ದ ಅಡಕೆ ಇವತ್ತು ಕಾಂಗ್ರೆಸ್‌ಗರ ದೃಷ್ಠಿಯಲ್ಲಿ ಕ್ಯಾನ್ಸರ್ ತರುವ ವಸ್ತುವಾಗಿದೆ. ನಾವು ಇದಕ್ಕೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ನಾವು ಹೋರಾಟವನ್ನು ಮುಂದುವರೆಸುತ್ತೇವೆ. ಈ ಪ್ರದೇಶದಲ್ಲಿ ಅಡಕೆ ಬೆಳೆಯುವ ಕೃಷಿಕರು ಜಾಸ್ತಿ ಇದ್ದಾರೆ. ಇಲ್ಲಿ ವಿಶೇಷವಾದ ಹೊಸ ಮಾದರಿ ಕಾಲೇಜು ಮಂಜೂರುಗೊಂಡಿದೆ. ಈ ಕಾಲೇಜಿನ ಸುಂದರ ಕಟ್ಟಡದ ಕನಸು ನನಸಾಗಬೇಕಾಗಿದೆ.
ವಿಧಾನ ಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡುತ್ತಾ, ಕಾಂಗ್ರೆಸ್ ಸರಕಾರ ೫೮ ವರ್ಷದಲ್ಲಿ154 ಕಾಲೇಜನ್ನು ಮಂಜೂರುಗೊಳಿಸಿದರೆ ,ಬಿಜೆಪಿ ಸರಕಾರದ ೫೮ದಿವಸದಲ್ಲಿ 194 ಕಾಲೇಜನ್ನು ಮಂಜೂರುಗೊಳಿಸಿದೆ. ಅದರಲ್ಲಿ ಕಾಣಿಯೂರು ನ್ಯೂ ಮಾಡೇಲ್ ಕಾಲೇಜು ಒಂದು. ನಮಗೆ ಒಂದು ಸುಂದರ ಕಲ್ಪನೆ ಇತ್ತು. ನಮ್ಮ ಮಕ್ಕಳು ಮುಂದೆ ಯಾವ ರೀತಿ ಜೀವನ ನಿರ್ವಹಣೆ ಮಾಡಬಹುದು ಎಂಬುದರ ಶಿಕ್ಷಣ ಕೊಡುವ ಭವಿಷ್ಯದ ದೃಷ್ಟಿಯಲ್ಲಿ ನ್ಯೂ ಮಾಡೇಲ್ ಕಾಲೇಜನ್ನು ಪ್ರಾರಂಭಿಸಿದ್ದು. ಅದಕ್ಕೆ ಕನಿಷ್ಠ 10 ರಿಂದ 20ಎಕ್ರೆ ಜಾಗದ ಅವಶ್ಯಕತೆ ಇದ್ದೆ ಇದೆ. ಆದ ಕಾರಣ ರಾಜಕೀಯದ ಒಣ ಪ್ರತಿಷ್ಠೆಯನ್ನು ಬದಿಗಿಟ್ಟು ಎಲ್ಲಾರು ಕೈಜೋಡಿಸಿ ಬೆಳಂದೂರು ಗ್ರಾಮದ ಸರ್ವೆ ನಂ ೯೯ರಲ್ಲಿರುವ ೩೮ ಎಕ್ರೆ ಜಾಗವನ್ನು ಒದಗಿಸುವುದೇ ಸೂಕ್ತ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಮಾತಾಡುತ್ತಾ, ಇಲ್ಲಿಯ ನ್ಯೂ ಮಾಡೇಲ್ ಕಾಲೇಜಿನ ನಿವೇಶನದ ಗೊಂದಲಗಳು ಪತ್ರಿಕೆಯ ಮೂಲಕ ಗೊತ್ತಾಗಿರುತ್ತದೆ. ಇಲ್ಲಿನ ತಹಾಶೀಲ್ದಾರರಿಗೆ ರಾಜಕೀಯದ ಮೂಲಕ ಒತ್ತಡ ಹಾಕಿ ಕಾಲೇಜು ಅಭಿವೃದ್ಧಿಯ ಸಮಿತಿಯ ಪ್ರಸ್ತಾವನೆಯ ಜೊತೆಗೆ ಬೆಳಂದೂರು ಪಂಚಾಯತ್‌ನವರು ಕೊಟ್ಟಂತಹ ಪ್ರಸ್ತಾವನೆಯನ್ನು ಜೊತೆಜೊತೆ ಕಳುಹಿಸಿ ಸಹಾಯಕ ಕಮೀಷನರ್ ಮತ್ತು ಜಿಲ್ಲಾಧಿಕಾರಿಗಳನ್ನು ಗೊಂದಲಕ್ಕೆ ಎಡೆ ಮಾಡಿದಂತೆ ಮಾಡಿದ್ದಾರೆ, ಇವರ ಎಡಬಿಡಂಗಿ ಕಾರ್ಯದಿಂದ ಕಾಲೇಜು ನಿವೇಶನ ವಿಳಂಬವಾಗುವುದಲ್ಲದೆ ಈ ಎಲ್ಲಾ ಗೊಂದಲಗಳಿಗೆ ತಹಶೀಲ್ದಾರರೇ ಕಾರಣವಾಗಿದ್ದಾರೆ. ಜನಾರ್ದನ ಪೂಜಾರಿ ಹೇಳುತ್ತಾರೆ ನಾನು ಎಂ.ಪಿಯಾಗಿರುತ್ತಿದ್ದರೆ ಅಡಕೆ ನಿಷೇಧವಾಗುವುದಕ್ಕೆ ಬಿಡುತ್ತಿರಲಿಲ್ಲ. ಆದರೆ ಕೇಂದ್ರದಲ್ಲಿ ಮತ್ತು ನಿಮ್ಮ ಕಾಂಗ್ರೆಸ್ ಸರಕಾರ ಇರುವಾಗ ಸೋನಿಯಾ ಗಾಂಧಿಯವರಿಗೆ ಖಾರವಾಗಿ ಹೇಳಿ ಅಡಕೆ ನಿಷೇಧವನ್ನು ಎಂದಿಗೂ ಮಾಡಬಾರದು .ಒಂದು ವೇಳೆ ಮಾಡಿದ್ದೇ ಆದರೆ ನಾನು ಬಿಜೆಪಿಗೆ ಹೋಗುತ್ತೇನೆ ಎಂದು ಹೇಳಿ, ಅದು ಬಿಟ್ಟು ಪತ್ರಿಕೆ ಹೇಳಿಕೆಗಳನ್ನು ನೀಡಿದರೆ ರೈತರಿಗೆ ಏನೂ ಪ್ರಯೋಜನವಾಗುವುದಿಲ್ಲ. ಕಾಂಗ್ರೇಸ್‌ಗರು ರೈತರಿಗೂ ಅನ್ಯಾಯ ಮಾಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿಯೂ ರಾಜಕೀಯ ಬೆರೆಸುತ್ತಿದ್ದಾರೆ. ಇದು ನ್ಯೂ ಮಾಡೇಲ್ ಕಾಲೇಜು ಆದಕಾರಣ ಇಲ್ಲಿ ಬೇರೆ ಬೇರೆ ವ್ಯವಸ್ಥೆಗಳು ಒಂದೆ ಕಡೆ ಆದಕಾರಣ ಇದಕ್ಕೆ ೨೦ ಎಕ್ರೆ ಜಾಗದ ಅವಶ್ಯಕತೆ ಇದೆ. ರಾಜಕೀಯದ ಯಾವುದೇ ಒತ್ತಡಕ್ಕೆ ಬಗ್ಗದೆ ಕಂದಾಯ ಅಧಿಕಾರಿಗಳು ಬೆಳಂದೂರು ಗ್ರಾಮದ ಸರ್ವೆ ನಂ ೯೯ರಲ್ಲಿರುವ ೩೮ ಎಕ್ರೆ ಜಾಗದಲ್ಲಿ ನಿವೇಶನವನ್ನು ಒದಗಿಸುವಂತೆ ಒತ್ತಾಯಿಸಿದ್ದರು.
ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸುಳ್ಯಕ್ಷೇತ್ರದ ಶಾಸಕ ಎಸ್ ಅಂಗಾರರವರು ಮಾತನಾಡಿ, ನನ್ನ ಕ್ಷೇತ್ರದಲ್ಲಿ ಕಳೆದ 20 ವರ್ಷಗಳಲ್ಲಿ ಗಣನೀಯವಾಗಿ ಅಭಿವೃಧಿಗಳು ಆಗಿದೆ. ಇದರಲ್ಲಿ ಎರಡು ಪ್ರಥಮ ದರ್ಜೆ ಕಾಲೇಜುಗಳು ಸೇರಿದೆ. ಇಂತಹ ಅಭಿವೃದ್ಧಿಯನ್ನು ಸಹಿಸದ ಕೆಲವು ಕಾಂಗ್ರೇಸ್ ಪುಡಾರಿಗಳು ತಿಳುವಳಿಕೆ ಇಲ್ಲದೆ ಅಲ್ಪತನವನ್ನು ತೋರಿಸಿ ಶಿಕ್ಷಣದಲ್ಲಿ ರಾಜಕೀಯ ಮಾಡುವುದು ಎಂದಿಗೂ ಸರಿಯಲ್ಲ. ನಾನು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮತ್ತು ಉನ್ನತ ಶಿಕ್ಷಣ ಸಚಿವ ಆರ್.ವಿ ದೇಶಪಾಂಡೆಯವರ ಜೊತೆ ಮಾತನಾಡಿದ್ದೇನೆ ನೀವು ಕಾಲೇಜು ಶಿಕ್ಷಣದಲ್ಲಿ ರಾಜಕೀಯ ಮಾಡುವುದು ಬೇಡ ಶಿಕ್ಷಣ ಸಂಸ್ಥೆ ರಾಜಕೀಯ ರಹಿತವಾಗಿ ಸುಸೂತ್ರವಾಗಿ ನಡೆಯಲಿ, ಎಂದು ಕೇಳಿಕೊಂಡಿದ್ದೇನೆ. ಆದರೆ ಇಲ್ಲಿಯ ಚಿಲ್ಲರೆ ಕಾಂಗ್ರೇಸ್ ಪುಡಾರಿಗಳಿಗೆ ಇದು ಅರ್ಥವಾಗದಿದ್ದರೆ ಹೇಗೆ. ಇವರ ರಾಜಕೀಯ ಕೇವಲ ಶಿಕ್ಷಣದಲ್ಲಿ ಮಾತ್ರವಲ್ಲ ಬೇರೆ ಬೇರೆ ಅಭಿವೃದ್ಧಿಯಲ್ಲಿ ಮಾಡುತ್ತಿದ್ದರೆ. ಶಾಂತಿಮೊಗರು ಎಂಬಲ್ಲಿ ಸೇತುವೆ ಸುಮಾರು ಏಳೆಂಟು ಬಾರಿ ಟೆಂಡರ್ ಕರೆದರೂ ಯಾರೂ ಟೆಂಡರು ಹಾಕದ ಕಾರಣ ವಿಳಂಬವಾಗುತ್ತಿದೆ. ಆದರೆ ಕಾಂಗ್ರೇಸ್‌ಗರು ಸೇತುವೆ ರಚನೆ ಮಾಡುತ್ತೇವೆ ಎಂದು ಸಹಿಸಂಗ್ರಹ ಮಾಡುವುದು ಹಾಸ್ಯಸ್ಪದವಾಗಿದೆ. ಇದು ಹೊಸ ಮಾದರಿ ಕಾಲೇಜು ಇದಕ್ಕೆ ಕೇವಲ 2ಎಕ್ರೆ ಜಾಗ ಸಾಕಾಗುವುದಿಲ್ಲ, ಅದು ಅಲ್ಲದೇ ಸರಕಾರಿ ಹಿರಿಯ ಪ್ರಾಥಮಿಕ ಜಾಗವನ್ನು ಬೇರೆ ಇಲಾಖೆಗಳಿಗೆ ಕೊಡಲಿಕೆ ಬರುವುದಿಲ್ಲ ಎಂಬುದು ಎಲ್ಲಾರಿಗೂ ಗೊತ್ತಿರುವ ವಿಚಾರ. ಆದರೆ ಕಾಂಗ್ರೇಸ್‌ಗರಿಗೆ ಗೊತ್ತೆ ಇಲ್ಲ. ಇಲ್ಲಿಂದ ಕಾಲೇಜು ಬೇರೆ ಕಡೆ ಹೋದರೆ ಕಾಂಗ್ರೇಸೆ ಕಾರಣ ಎಂದರು. ದಯವಿಟ್ಟು ನಿಮ್ಮ ರಾಜಕೀಯವನ್ನು ಬದಿಗಿಡಿ. ನಾವು ಪ್ರಸ್ತಾವನೆ ಇಟ್ಟ ಬೆಳಂದೂರು ಗ್ರಾಮದ ಸರ್ವೆ ನಂ 99 ರಲ್ಲಿ ಇರುವ ಜಾಗದಲ್ಲಿ ನಿವೇಶನ ಒದಗಿಸುವಲ್ಲಿ ಅಧಿಕಾರಿಗಳೊಂದಿಗೆ ನೀವು ಕೈಜೋಡಿಸಿ ಎಂದು ಹೇಳಿದರು.
ಜಿ.ಪಂ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷೆ ಆಶಾ ತಿಮ್ಮಪ್ಪ ಮಾತನಾಡಿ, ಶಾಲಾ ಎಸ್.ಡಿ.ಎಂ.ಸಿಯವರಿಗೆ ಶಾಲೆಯ ಜಾಗವನ್ನು ಪರಾಬಾರೆ ಮಾಡುವ ಹಕ್ಕಿರುವುದಿಲ್ಲ. ಬದಲಾಗಿ ಶಾಲೆಯ ಜಾಗವನ್ನು ಆವರಣ ನಿರ್ಮಿಸಿ, ರಕ್ಷಿಸುವಂತಹ ಜವಾಬ್ದಾರಿ ಮಾತ್ರ ಇರುತ್ತದೆ ಎಂದರು.
ಜಿ.ಪಂ ಸದಸೆ ಸಾವಿತ್ರಿ ಶಿವಾರಾಂ, ತಾ.ಪಂ ಉಪಾಧ್ಯಕ್ಷ ಬಾಬು ಮಾದೋಡಿ, ತಾ.ಪಂ ಸದಸ್ಯ ದಿನೇಶ್ ಮೆದು, ಕಾಣಿಯೂರು ಗ್ರಾ.ಪಂ ಅಧ್ಯಕ್ಷ ದಿನೇಶ್ ಇಡ್ಯಡ್ಕ, ತಾ.ಪಂ ಮಾಜಿ ಉಪಾಧ್ಯಕ್ಷೆ ಪ್ರಮೀಳಾ ಜನಾರ್ದನ, ಸವಣೂರು ಸಿ.ಎ ಬ್ಯಾಂಕ್ ಅಧ್ಯಕ್ಷ ಉದಯ ರೈ ಮಾದೋಡಿ, ಪುತ್ತೂರು ಎ.ಪಿ.ಯಂ.ಸಿ ಸದಸ್ಯ ಸೋಮನಾಥ, ಕಾಣಿಯೂರು ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಪೋಷಕ ಸಮಿತಿಯ ಅಧ್ಯಕ್ಷ ಉಮಾಶಂಕರ್, ಉಪಸ್ಥಿತರಿದ್ದರು. ಕಾಲೇಜಿನ ಕಾರ್ಯಧ್ಯಕ್ಷ ಲಕ್ಷ್ಮಣ ಕರಂರ್ದ್ಲಾಜೆ ಪ್ರಾಸ್ತಾವಿಕ ಮಾತನಾಡಿದರು. ಕಾಣಿಯೂರು ಗ್ರಾ.ಪಂ ಮಾಜಿ ಅಧ್ಯಕ್ಷ ಶಿವಾನಂದ ಟಿ ಪುಣ್ಚತ್ತಾರು ಸ್ವಾಗತಿಸಿ, ಕಾಣಿಯೂರು ಗ್ರಾ.ಪಂ, ಸದಸ್ಯ ಪದ್ಮಯ್ಯ ಗೌಡ ಅನಿಲ ಕಾರ್ಯಕ್ರಮ ನಿರೂಪಿಸಿದರು.
ಪ್ರತಿಭಟನೆ ಸಭೆಯ ಬಳಿಕ ರಸ್ತೆ ತಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿ ಕಡಬ ವಿಶೇಷ ತಹಶೀಲ್ದಾರರ ಶಿವಪ್ಪರವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಮನವಿ ಸಿಕರಿಸಿ ತಹಾಶೀಲ್ದರಾರು ಮಾತನಾಡಿ, ನನ್ನ ಕಾರ್ಯನಿರ್ವಹಣೆಯ ಮಿತಿಯೊಳಗೆ ಒತ್ತಡವಿರುವ ಕಾರಣ ಎಡವಟ್ಟು ಆಗಿರುತ್ತದೆ. ಮುಂದಿನ ದಿವಸಗಳಲ್ಲಿ ಜಿಲ್ಲಾಧಿಕಾರಿಯವರಿಗೆ ಮನವರಿಕೆಯನ್ನು ಮಾಡುತ್ತೇವೆ ನನ್ನ ಉದ್ದೇಶವು ಅದೇ, ಕಾಲೇಜಿನ ನಿವೇಶನವೂ ಬೆಳಂದೂರು ಗ್ರಾಮದ ಸರ್ವೆ ನಂ ೯೯ರಲ್ಲಿರುವ ಜಾಗವೇ ಸೂಕ್ತ ಎಂದು ಈ ಸಂದರ್ಭದಲ್ಲಿ ನಿಮಗೆ ಭರವಸೆಯನ್ನು ಕೊಡುತ್ತಿದ್ಧೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಇತರ ಜನಪ್ರತಿನಿಧಿಗಳು ಸಾರ್ವಜನಿಕರು, ಒಂದು ವೇಳೆ 15 ದಿವಸದೊಳಗೆ ಮಂಜೂರಾತಿ ಆಗದೇ ಹೋದರೆ ಉಗ್ರವಾದ ಹೋರಾಟವನ್ನು ಮಾಡುವುದಾಗಿ ಘೋಷಣೆ ಮಾಡಿದರು.
ಪ್ರತಿಭಟನಾ ಸಭೆ ಮತ್ತು ರಸ್ತೆ ತಡೆ ನಡೆಯುವ ಸಂದರ್ಭದಲ್ಲಿ ಕಾಣಿಯೂರು ಪೇಟೆಯ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ವರ್ತಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಪ್ರತಿಭಟನಾ ಸಭೆಯಲ್ಲಿ ಮತ್ತು ರಸ್ತೆ ತಡೆಯಲ್ಲಿ ಪಾಲ್ಗೊಂಡ ಸಾರ್ವಜನಿಕರಿಗೆ ಕಾಣಿಯೂರು ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂದಿರದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು.
ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂಡಳಿ (ರಿ) ಕಾಣಿಯೂರು ,ಶ್ರೀ ಲಕ್ಷ್ಮೀ ನರಸಿಂಹ ಯುವಕ ಮಂಡಲ (ರಿ) ಕಾಣಿಯೂರು ,ವಿಶ್ವಜ್ಞ ಯುವಕ ಮಂಡಲ (ರಿ) ಕಾಣಿಯೂರು ,ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ (ರಿ) ಕೂಡುರಸ್ತೆ, ಕಾಣಿಯೂರು, ಶಿವದುರ್ಗಾ ಗೆಳೆಯರ ಬಳಗ (ರಿ) ದೇವಿನಗರ ಚಾರ್ವಾಕ, ಗೆಳೆಯರ ಬಳಗ (ರಿ)ಕೊಡಿಮಾರು ಅಬೀರ ,ನಾಗರಿಕ ಕ್ರೀಯಾ ಸಮಿತಿ ಬೆಳಂದೂರು, ಶ್ರೀ ಕ್ಷೇ,ಧ.ಗ್ರಾ.ಯೋಜನೆ ಕಾಣಿಯೂರು ಎ ಒಕ್ಕೂಟ,
ಶ್ರೀ ಕ್ಷೇ.ಧ.ಗ್ರಾ.ಯೋಜನೆ ಕಾಣಿಯೂರು ಬಿ.ಒಕ್ಕೂಟ, ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ ನಾವೂರು, ಶ್ರೀ ಹರಿ ಭಜನಾ ಮಂಡಳಿ ಪುಣ್ಚತ್ತಾರು, ಕೇಸರಿ ಫ್ರೆಂಡ್ಸ್ ಚಾರ್ವಾಕ, ಶ್ರೀ ಕ್ಷೇತ್ರ ದೈಪಿಲ ಕ್ರೀಡಾ ಸಂಘ, ಶ್ರೀ ಲಕ್ಷ್ಮೀ ಯುವತಿ ಮಂಡಲ ಕಾಣಿಯೂರು ,ಶ್ರೀ ಕ್ಷೇ.ಧ.ಗ್ರಾ.ಯೋಜನೆ ಚಾರ್ವಾಕ ಎ ಒಕ್ಕೂಟ,ನಾಣಿಲ ಶ್ರೀ ಕ್ಷೇ.ಧ.ಗ್ರಾ.ಯೋಜನೆ ಚಾರ್ವಾಕ ಬಿ ಒಕ್ಕೂಟ, ಶ್ರೀ ಕ್ಷೇ.ಧ.ಗ್ರಾ. ಯೋಜನೆ ದೋಳ್ಪಾಡಿ ಒಕ್ಕೂಟ