ಮಂಗಳೂರು: ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಶನಿವಾರ ನಗರದಾದ್ಯಂತ ದೇವಾಲಯಗಳ ಭೇಟಿ ಮಾಡಿ ಪ್ರಾರ್ಥನೆ ಸಲ್ಲಿಸಿ ಆ ಬಳಿಕ ತಮ್ಮ ಚುನಾವಣಾ ಪ್ರಚಾರ ಕಾರ್ಯವನ್ನು ಆರಂಭಿಸಿದರು.
ಶ್ರೀ ಕ್ಷೇತ್ರ ಗೋಕರ್ಣನಾಥೇಶ್ವರ ಕ್ಷೇತ್ರದಿಂದ ಮೊದಲುಗೊಂಡು ನಾಗಬ್ರಹ್ಮ ಅಳಕೆ, ಕಾಳಿಕಾಂಬ ಸಿದ್ಧಿ ವಿನಾಯಕ ದೇವಸ್ಥಾನ , ಮುಖ್ಯಪ್ರಾಣ ದೇವಸ್ಥಾನ, ವೆಂಕಟರಮಣ ದೇವಸ್ಥಾನಗಳಿಗೆ ಭೇಟಿ ನೀಡಿದರು.
ಈ ಸಂಧರ್ಭದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ‘ಈ ಹಿಂದೆ ಚುನಾವಣಾ ಪ್ರಚಾರ ಪ್ರಾರಂಭ ಮಾಡಿದಂತೆ ಈ ವರ್ಷವು ಶ್ರೀ ಗೋಕರ್ಣನಾಥಕ್ಷೇತ್ರದ ಶ್ರೀಮಂಜುನಾಥ ಸ್ವಾಮಿ ಮತ್ತು ಶ್ರೀಗುರುಗಳಾದ ಬ್ರಹ್ಮಶ್ರೀನಾರಾಯಣ ಗುರುಗಳ ದಿವ್ಯ ಆಶೀರ್ವಾದ ದೊಂದಿಗೆ ಇಂದಿನಿಂದ ಅಧಿಕೃತ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದೇನೆ’ ಎಂದರು.
ಅಲ್ಲದೇ ’ಸಮಾಜಕ್ಕೆ ಮತ್ತು ರಾಷ್ಟ್ರಕ್ಕೆ ಹಿತ ಮತ್ತು ಮಂಗಳವಾಗಲೆಂದು ಸ್ಪರ್ಧಿಸುತ್ತಿದ್ದೇನೆ. ಎಲ್ಲೆಡೆ ಬಿಜೆಪಿ ಮತ್ತು ಮೋದಿಪರ ಅಲೆಯಿದೆ’ ಎಂದರು.