ಸುಳ್ಯ: ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ಕುಮರ್ ಕಟೀಲ್ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ಚುನಾವಣಾ ಪ್ರಚಾರ ಕೈಗೊಂಡರು. ಸುಳ್ಯ ವಿಧಾಸಭಾ ಕ್ಷೇತ್ರ ವ್ಯಾಪ್ತಿಯ ಒಂಭತ್ತು ಶಕ್ತಿ ಕೇಂದ್ರಗಳಲ್ಲಿಯೂ ನಳಿನ್ಕುಮಾರ್ ಪ್ರವಾಸ ಮಾಡಿ ಚುನಾವಣಾ ಪ್ರಚಾರ ಕೈಗೊಂಡರು. ಶಕ್ತಿ ಕೇಂದ್ರ ವ್ಯಾಪ್ತಿಯ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ ಅವರು ಆಯಾ ಪ್ರದೇಶದ ಪ್ರಮುಖರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಕಾರ್ಯಕರ್ತರನ್ನು ಭೇಟಿ ಮಾಡಿದರಲ್ಲದೆ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರಲ್ಲಿ ಮತಯಾಚನೆ ನಡೆಸಿದರು. ಜಾಲ್ಸೂರು ಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಬಳಿಕ ಅರಂಬೂರು ಮತ್ತು ಸುಳ್ಯ ನಗರಗಳಲ್ಲಿ ಪ್ರವಾಸ ಕೈಗೊಂಡರು. ಆ ಬಳಿಕ ನಗರದಲ್ಲಿ ಮತ ಯಾಚನೆ ನಡೆಸಿದರು. ಬಳಿಕ ಬೆಳ್ಳಾರೆ, ಬಾಳಿಲ, ಗುತ್ತಿಗಾರು, ಪಂಜ, ಬೆಳಂದೂರು, ಕಡಬ, ನೆಲ್ಯಾಡಿ, ಆಲಂಕಾರು ಗಳಲ್ಲಿಯೂ ಚುನಾವಣಾ ಪ್ರಚಾರ ಕೈಗೊಂಡರು.
ಈ ಭಾರಿ ಸಾರ್ವಜನಿಕ ಸಭೆ, ಪಾದಯಾತ್ರಗಳಿಗಿಂತ ಭಿನ್ನವಾಗಿ ಮನೆ ಮನೆ ಯಾತ್ರೆಗೆ ಬಿಜೆಪಿ ಹೆಚ್ಚು ಆದ್ಯತೆ ನೀಡುವುದಾಗಿ ನಳಿನ್ಕುಮಾರ್ ತಿಳಿಸಿದರು.ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು, ಸುಳ್ಯ ಬಿಜೆಪಿ ಮಂಡಲ ಸಮಿತಿಯ ಅಧ್ಯಕ್ಷ ಹರೀಶ್ ಕಂಜಿಪಿಲಿ ಮತ್ತಿತರರು ನಳಿನ್ಕುಮಾರ್ ಕಟೀಲ್ ಅವರ ಜೊತೆಯಲ್ಲಿದ್ದರು.