ಮಂಗಳೂರು: ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಅವರ 100 ದಿನಗಳ ಸಾಧನೆಯ ವರದಿಯನ್ನೊಳಗೊಂಡ ಮತ್ತು ಮೊದಲ ಐದು ವರ್ಷಗಳ ಸಾಧನೆ ಮತ್ತು ಚಟುವಟಿಕೆಗಳ ಪಕ್ಷಿನೋಟವನ್ನು ಒಳಗೊಂಡ ಕಿರುಹೊತ್ತಿಗೆ ‘ನೂರುಹೆಜ್ಜೆ’ಯನ್ನು ಗುರುವಾರ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಅನಾವರಣಗೊಳಿಸಲಾಯಿತು.
ಈ ಸಂದರ್ಭ ಬಿಜೆಪಿ ಮುಖಂಡರುಗಳಾದ ಮೋನಪ್ಪ ಭಂಡಾರಿ, ರವಿಶಂಕರ್ ಮಿಜಾರ್, ಜಗದೀಶ್ ಅಧಿಕಾರಿ, ಸಂಜಯ್ ಪ್ರಭು, ಸತೀಶ್ ಪ್ರಭು ಮುಂತಾದವರು ಉಪಸ್ಥಿತರಿದ್ದರು.
ಪುಸ್ತಕದಲ್ಲಿರುವ ಕೆಲ ಮಾಹಿತಿಗಳು :
100 ದಿನಗಳಲ್ಲಿ ನಳಿನ್ ಭೇಟಿ ನೀಡಿದ ಗ್ರಾಮಗಳ ವಿವರ: 100 ದಿನಗಳಲ್ಲಿ ಒಟ್ಟು 137 ಗ್ರಾಮಗಳ ಭೇಟಿ ನೀಡಲಾಗಿದೆ. ಬೆಳ್ತಂಗಡಿಯ 16 ಗ್ರಾಮ, ಮಂಗಳೂರು ನಗರ ಉತ್ತರದ 21 ಗ್ರಾಮ, ಮಂಗಳೂರಿನ-ಮೂಡಬಿದ್ರಿಯ 10, ಬಂಟ್ವಾಳದ 31, ಪುತ್ತೂರಿನ 17 ಮತ್ತು ಸುಳ್ಯದ 21 ಗ್ರಾಮಗಳಿಗೆ ಭೇಟಿ ನೀಡಿದ್ದಾರೆ.
ಸಂಸತ್ತಿನಲ್ಲಿ : ಒಟ್ಟು 86 ಪ್ರಶ್ನೆಗಳನ್ನು ಕೇಳಿರುವ ನಳಿನ್ , 8 ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ.
ಪ್ರದೇಶಾಭಿವೃದ್ಧಿ ನಿಧಿ: 2014-15 ನೇ ಸಾಲಿನ ಪ್ರಥಮ ಕಂತಿನಲ್ಲಿ ಬಿಡುಗಡೆಯಾಗಿರುವ ರೂ.2.50 ಕೋಟಿ ಅನುದಾನಕ್ಕೆ ಒಟ್ಟ 83 ಕಾಮಗಾರಿಗಳನ್ನು ಪ್ರಸ್ತಾವನೆ ಸಲ್ಲಿಸಲಾಗಿದೆ.
ಪ್ರವಾಸೋದ್ಯಮ : ಕೇಂದ್ರ ಸರಕಾರವು ಕರ್ನಾಟಕ ಕರಾವಳಿ ಜಿಲ್ಲೆಗಳ ಬೀಚ್‌ಗಳ ಅಭಿವೃದ್ಧಿಗೆ ಒಟ್ಟು ರೂ.50.00 ಕೋಟಿ ಅನುದಾನ ಬಿಡುಗಡೆ ಮಾಡಿರುತ್ತದೆ. ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 5 ಬೀಚ್‌ಗಳ ಅಭಿವೃದ್ಧಿಗೆ ಒಟ್ಟು ರೂ.13.70 ಕೋಟಿ ಬಿಡುಗಡೆಯಾಗಿದೆ
ಉಳ್ಳಾಲ ಬೀಚ್ ರೂ.1.00 ಕೋಟಿ
ಸೋಮೇಶ್ವರ ಬೀಚ್ ರೂ.3.00 ಕೋಟಿ
ತಲಪಾಡಿ ಬೀಚ್ ರೂ.3.00 ಕೋಟಿ
ಸುರತ್ಕಲ್ ಬೀಚ್ ರೂ.2.00 ಕೋಟಿ
ಸುಲ್ತಾನ್‌ಬತ್ತೇರಿ ಬೀಚ್ ರೂ.2.00 ಕೋಟಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಗೆ 2014-15ನೇ ಸಾಲಿನಲ್ಲಿ ಒಟ್ಟು ರೂ.10.67 ಕೋಟಿ ಅನುದಾನ ಬಿಡುಗಡೆಯಾಗಿದೆ.
ತೋಟಗಾರಿಕೆ : ತೋಟಗಾರಿಕೆ ಅಭಿವೃದ್ಧಿಗೆ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳಡಿ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಒಟ್ಟು ರೂ.1.17 ಕೋಟಿ ಅನುದಾನ ಬಿಡುಗಡೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ : ಜಿಲ್ಲೆಯ ವಿವಿಧ ಇಲಾಖೆಗಳಿಗೆ ಸಂಬಂಧಪಟ್ಟಂತೆ ಒಟ್ಟು ರೂ.107.85 ಕೋಟಿ ಅನುದಾನ ಕೇಂದ್ರ ಸರಕಾರದಿಂದ ಬಿಡುಗಡೆಯಾಗಿದೆ.
ರಾಷ್ಟ್ರೀಯ ಹೆದ್ದಾರಿ :
ಶಿರಾಡಿ ಘಾಟ್ : ರಾಷ್ಟ್ರೀಯ ಹೆದ್ದಾರಿ 48ರ ಗುಂಡ್ಯದಿಂದ-ಮಾರ್ನಹಳ್ಳಿಯವರೆಗಿನ ರಸ್ತೆಯಲ್ಲಿ ಕಿ.ಮೀ 216.00 ರಿಂದ ಕಿ.ಮೀ237.00ವರೆಗೆ ಹಾಗೂ ಕಿ.ಮೀ.250.00 ರಿಂದ ಕಿ.ಮೀ 263.೦೦ರ ವರೆಗೆ ಡಾಮರೀಕರಣಕ್ಕೆ ಒಟ್ಟು ರೂ.83.28ಕೋಟಿ ಮತ್ತು ಕಿ.ಮೀ237 ರಿಂದ ಕಿ.ಮೀ 250.620ವರೆಗಿನ ರಸ್ತೆ ಕಾಂಕ್ರಟೀಕರಣಕ್ಕೆ ಒಟ್ಟು ರೂ.69.90 ಕೋಟಿ ಅನುದಾನ ಬಿಡುಗಡೆಗೊಂಡು ಟೆಂಡರ್ ಪ್ರಕ್ರಿಯೆಯು ಮುಗಿದಿದೆ.
ಪ್ರಸ್ತಾವನೆಗಳು:
1. ಮಂಗಳೂರು-ಮೂಡಬಿದ್ರಿ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ 13ರ ಅಭಿವೃದ್ಧಿಗೆ ಒಟ್ಟು ರೂ.280.00ಕೋಟಿ
2. ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬಿ.ಸಿರೋಡ್‌ನಿಂದ ಅಡ್ಡಹೊಳೆಯವರೆಗಿನ ರಸ್ತೆಯನ್ನು ಚತುಷ್ಟತ ಗೊಳಿಸುವ ಬಗ್ಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಪ್ರಗತಿಯ ಹಂತದಲ್ಲಿದೆ.
3.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 48 ಹಾಗೂ 13ರ ದುರಸ್ಥಿಗೆ ಒಟ್ಟು ರೂ.39.00 ಕೋಟಿಗಳ ಪ್ರಸ್ತಾವನೆಯನ್ನು ಮಾನ್ಯ ಕೇಂದ್ರ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವರಾದ ಶ್ರೀ.ನಿತಿನ್ ಗಡ್ಕರಿಯವರಿಗೆ ಸಲ್ಲಿಸಲಾಗಿದೆ.
ಮಂಗಳೂರು- ಬೆಂಗಳೂರು ಹೆದ್ದಾರಿ 48ರಲ್ಲಿ ಕಿ.ಮೀ263 ರಿಂದ 286ರ ವರೆಗೆ ಅಭಿವೃದ್ಧಿಗೆ ರೂ.9.00ಕೋಟಿ
ಮಂಗಳೂರು- ಬೆಂಗಳೂರು ಹೆದ್ದಾರಿ 48ರಲ್ಲಿ ಕಿ.ಮೀ286 ರಿಂದ 309ರ ವರೆಗೆ ಅಭಿವೃದ್ಧಿಗೆ ರೂ.9.00ಕೋಟಿ
ಮಂಗಳೂರು- ಸೋಲಾಪುರ ಹೆದ್ದಾರಿ 13ರಲ್ಲಿ ಕಿ.ಮೀ705 ರಿಂದ 725ರ ವರೆಗೆ ಅಭಿವೃದ್ಧಿಗೆ ರೂ.6.00ಕೋಟಿ
ಮಂಗಳೂರು- ಬೆಂಗಳೂರು ಹೆದ್ದಾರಿ 48ರಲ್ಲಿ ಕಿ.ಮೀ309 ರಿಂದ 328ರ ವರೆಗೆ ಅಭಿವೃದ್ಧಿಗೆ ರೂ.15.00ಕೋಟಿ.
ರಸ್ತೆಗಳನ್ನು ಮೇಲ್ದರ್ಜೆಗೇರಿಸುವುದು:
ಈ ಕೆಳಗಿನ ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಿ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸುವ ಬಗ್ಗೆ ಈಗಾಗಲೇ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಪ್ರಗತಿಯ ಹಂತದಲ್ಲಿದೆ.
1. ರಾಷ್ಟ್ರೀಯ ಹೆದ್ದಾರಿ 48 ಹಾಗೂ ರಾಷ್ಟ್ರೀಯ ಹೆದ್ದಾರಿ 17ನ್ನು ಸಂಪರ್ಕಿಸುವ ರಸ್ತೆ : ಬಿ.ಸಿರೋಡ್(ರಾಷ್ಟ್ರೀಯ ಹೆದ್ದಾರಿ 48) ನಿಂದ – ಮೂಲ್ಕಿ(ರಾ.ಹೆ.17) ಯವರೆಗಿನ (ವಯಾ ಪೊಳಲಿ-ಕಟೀಲು-ಕಿನ್ನಿಗೋಳಿ) 48.10 ಕಿ.ಮೀ ರಾಜ್ಯಹೆದ್ದಾರಿ ಯನ್ನು ಮೇಲ್ದರ್ಜೆಗೇರಿಸುವುದು.
2. ಉಡುಪಿ (ರಾಷ್ಟ್ರೀಯ ಹೆದ್ದಾರಿ 17) – ಸುಳ್ಯ (ರಾಜ್ಯ ಹೆದ್ದಾರಿ 85) (ವಯಾ ಕಾರ್ಕಳ-ಧರ್ಮಸ್ಥಳ-ಕುಕ್ಕೆಸುಬ್ರಹ್ಮಣ್ಯ) 170.00 ಕಿ.ಮೀ ರಸ್ತೆಯನ್ನು ಮೇಲ್ದರ್ಜೆಗೇರಿಸುವುದು.
3. ಮಾಣಿ-ಉಳ್ಳಾಲ (ವಯಾ ಮೆಲ್ಕಾರು-ಮುಡಿಪು-ತೊಕ್ಕೋಟು) ರಾಜ್ಯ ಹೆದ್ದಾರಿಯ ಒಟ್ಟು 29.00 ಕಿ.ಮೀ ರಸ್ತೆಯನ್ನು ಮೇಲ್ದರ್ಜೆಗೇರಿಸುವುದು.
4. ರಾಜ್ಯ ಹೆದ್ದಾರಿಯ 66 ಮೂಲ್ಕಿ-ಪೆರಿಯಶಾಂತಿ (ವಯಾ ಮೂಡಬಿದ್ರಿ-ಬೆಳ್ತಂಗಡಿ- ಧರ್ಮಸ್ಥಳ) 102.95 ಕಿ.ಮೀ ರಸ್ತೆಯನ್ನು ಮೇಲ್ದರ್ಜೆಗೇರಿಸುವುದು.