Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಬಂಟರ ಭವನ ಶಂಕುಸ್ಥಾಪನೆ

ಬಂಟ್ವಾಳ: ಬಂಟ ಸಮುದಾಯವು ತಮ್ಮ ಬುದ್ದಿವಂತಿಕೆಯನ್ನು ಸದ್ಭಳಕೆ ಮಾಡಿಕೊಂಡು ತಮ್ಮ ಸಮುದಾಯದ ಅಭಿವೃದ್ಧಿ ಸಾಧಿಸುವುದರ ಜತೆಯಲ್ಲಿ ಸಮಾಜದಲ್ಲಿರುವ ಎಲ್ಲಾ ಸಮುದಾಯದ ಶ್ರೇಯೋಭಿವೃದ್ಧಿಗೆ ಇನ್ನಷ್ಟು ಕಾರ್ಯೋನ್ಮುಖರಾಗುವ ಮೂಲಕ ತಮ್ಮ ಪರೋಪಕಾರ ಗುಣ ಹಾಗೂ ಹೃದಯ ವೈಶಾಲ್ಯತೆಯನ್ನು ಮೆರೆಯುವಂತಾಗಲಿ ಎಂದು ಶ್ರೀಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ.

ಬಂಟ್ವಾಳ ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಭಾನುವಾರ ಬ್ರಹ್ಮರಕೂಟ್ಲುವಿನ ಬಂಟರ ನಿವೇಶನದಲ್ಲಿ ಬಂಟವಾಳದ ಬಂಟರ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಆಶೀರ್ವಚನ ನೀಡಿದರು.
ಬಂಟ ಸಮಾಜ ಕ್ಷೀಣವಾಗಿಲ್ಲವೆನ್ನುವುದಕ್ಕೆ ಇವತ್ತಿನ ಸಮಾರಂಭದಲ್ಲಿ ಕಾಣುವ ಬಂಟರ ಶಕ್ತಿ ಪ್ರದರ್ಶನವೇ ಸಾಕ್ಷಿಯಾಗಿದೆ. ಪ್ರೀತಿ ಇದ್ದಲ್ಲಿ ಸಂಪತ್ತು ಮತ್ತು ಯಶಸ್ಸು ತನ್ನಿಂತಾನೆ ಬರುತ್ತದೆ ಎನ್ನುವುದಕ್ಕೆ ಬಂಟ ಸಮುದಾಯ ನಿದರ್ಶನವಾಗಿದೆ. ಬಂಟ ಸಮುದಾಯ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಇಂದು ಗುರುತಿಸಿಕೊಂಡಿದ್ದು ಬಂಟ ಸಮುದಾಯದ ಯುವಶಕ್ತಿ ಒಟ್ಟಾಗುವ ಮೂಲಕ ಸಾಮಾಜಿಕ ಸವಾಲುಗಳಿಗೆ ಉತ್ತರ ನೀಡಲು ಮುಂದಾಗಬೇಕಾಗಿದೆ ಎಂದು ಸ್ವಾಮೀಜಿ ಹೇಳಿದರು.

bunts

ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಸಮಾರಂಭ ಉದ್ಘಾಟಿಸಿ, ಬಂಟ್ವಾಳ ತಾಲೂಕು ಬಂಟರ ಸಂಘದ ನೂತನ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು ಸಹಿತ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿದರು. ಇದೇ ಸಂದರ್ಭ ಬಂಟವಾಳ ಬಂಟರ ಭವನ ನಿರ್ಮಾಣಕ್ಕೆ ದೇಣಿಗೆಯಾಗಿ ಮಾತೃ ಸಂಘದ ವತಿಯಿಂದ ೨೫ ಲಕ್ಷ ರೂಪಾಯಿಯ ಚೆಕ್ ಹಸ್ತಾಂತರಿಸಿದರು.

ಸಮುದಾಯದ ಅನೇಕ ಹಿರಿಯರ ಪ್ರಯತ್ನದ ಫಲವಾಗಿ ಬಂಟರ ಮಾತೃ ಸಂಘ ಬೆಳೆದಿದೆ. ಈಗ ಸಂಘವು ಶತಮಾನೋತ್ಸವದ ಸಿದ್ದತೆಯಲ್ಲಿದ್ದು ಈ ಸಂದರ್ಭ ಮೂರು ಜಿಲ್ಲೆಗಳ ಬಂಟರ ಪ್ರತಿ ಮನೆಗೂ ಬೇಟಿ ನೀಡಲಾಗುವುದು. ಶೀರ್ಘದಲ್ಲಿ ಜಾಗತಿಕ ಬಂಟರ ಸಮ್ಮೆಳನವೂ ನಡೆಯಲಿದೆ. ಸಂಘಟನೆಯ ಮೂಲಕ ಸಮುದಾಯದ ಸಂಸ್ಕೃತಿ, ನಾಯಕತ್ವ ಹಾಗೂ ಪರೋಪಕಾರ ಗುಣ ಮೆರೆಯಬೇಕು. ಬಂಟರ ಸಂಘಟಿತರಾಗುವ ಮೂಲಕ ರಾಜಕೀಯವಾಗಿಯೂ ಬಂಟರ ಬಲವನ್ನು ತೋರಿಸಬೇಕು ಎಂದು ಅಜಿತ್ ಕುಮಾರ್ ರೈ ಹೇಳಿದರು.

ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು ಅಧ್ಯಕ್ಷತೆ ವಹಿಸಿದ್ದರು. ಬಂಟರ ಸಂಘದ ಆಶ್ರಯದಲ್ಲಿ ತಾಲೂಕಿನಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವ ಬಗ್ಗೆಯೂ ಚಿಂತನೆ ನಡೆಸಲಾಗುವುದು ಎಂದರು.

ರಾಜ್ಯ ಅರಣ್ಯ ಸಚಿವ ಹಾಗೂ ಕಟ್ಟಡ ಸಮಿತಿ ಗೌರವಾಧ್ಯಕ್ಷ ಬಿ.ರಮಾನಾಥ ರೈ, ಸಂಸದ ಹಾಗೂ ಕಟ್ಟಡ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು, ಕಟ್ಟಡ ಸಮಿತಿ ಕಾರ್ಯಾಧ್ಯಕ್ಷ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ, ಚಿತ್ರನಟ ಪ್ರಕಾಶ್ ರೈ, ಉದ್ಯಮಿಗಳಾದ ಪ್ರಸನ್ನ ಶೆಟ್ಟಿ ಏಚಿಲ್ ಬೆಳ್ಳೂರು, ಎ.ಸದಾನಂದ ಶೆಟ್ಟಿ ಮಂಗಳೂರು, ಎ.ಜೆ.ಶೆಟ್ಟಿ ಮಂಗಳೂರು, ಕೆ.ಪಿ.ಶೆಟ್ಟಿ ಮೊಡಂಕಾಪುಗುತ್ತು, ರಘು ಎಲ್.ಶೆಟ್ಟಿ ಬೆಳ್ಳೂರು, ಡಾ.ನಂದಕಿಶೋರ ಆಳ್ವ ಅಳಿಕೆ, ಪಿ.ವಿ.ಶೆಟ್ಟಿ ಬೆಳ್ಳೂರು, ಸಿ.ಎ.ಶಂಕರ ಬಿ.ಶೆಟ್ಟಿ ಮುಂಬೈ, ಮಂಜುನಾಥ ಭಂಡಾರಿ ಶೆಡ್ಡೆ, ಸುರೇಶ್ ಆಳ್ವ ಪರಾರಿಗುತ್ತು, ರಾಜೇಶ್ ಎಸ್.ಚೌಟ ಮಂಗಳೂರು, ರೋಹಿತ್ ಡಿ.ಶೆಟ್ಟಿ ನಗ್ರಿಗುತ್ತು, ಲಕ್ಷ್ಮೀಶ ಭಂಡಾರಿ ಮಂಗಳೂರು, ರವಿ ಶಂಕರ ಶೆಟ್ಟಿ ಬಡಾಜೆ, ವಿಶ್ವನಾಥ ಶೆಟ್ಟಿ ಕರ್ನಿರೆ, ಪ್ರಕಾಶ್ ಶೆಟ್ಟಿ ಬೆಂಗಳೂರು, ಅಜಿತ್ ಚೌಟ ದೇವಸ್ಯ, ದಾಮೋದರ ಎನ್.ರೈ ಕಾಡಬೆಟ್ಟು, ಎಂ.ಸಿ.ಆರ್ ಶೆಟ್ಟಿ ಮುಂಡಾಜೆಗುತ್ತು, ಅರವಿಂದ ಎ.ಶೆಟ್ಟಿ ನಡುಮೊಗರುಗುತ್ತು, ಕಿಶನ್ ಜೆ.ಶೆಟ್ಟಿ ಮುಂಬೈ, ಕುಸುಮೋದರ ಶೆಟ್ಟಿ ಚೆಲ್ಲಡ್ಕ, ಮಂಜುನಾಥ ಭಂಡಾರಿ ಬೆಳ್ಳೂರು, ಪುರುಷೋತ್ತಮ ರೈ ಮಂಗಳೂರು ಮೊದಲಾದವರು ಅತಿಥಿಗಳಾಗಿ ಮಾತನಾಡಿದರು.

ಸಂಘದ ಪದಾಧಿಕಾರಿಗಳಾದ ಲೋಕನಾಥ ಶೆಟ್ಟಿ, ಸದಾನಂದ ಡಿ.ಶೆಟ್ಟಿ ರಂಗೋಲಿ, ಪ್ರಪುಲ್ಲ ಆರ್.ರೈ, ಜಗದೀಶ ಶೆಟ್ಟಿ ಇರಾಗುತ್ತು, ನವೀನಚಂದ್ರ ಶೆಟ್ಟಿ ಮುಂಡಾಜೆಗುತ್ತು, ಚಂದ್ರಹಾಸ ರೈ ಬಾಲಾಜಿಬೈಲು ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿ ಚಂದ್ರಹಾಸ ಡಿ.ಶೆಟ್ಟಿ ರಂಗೋಲಿ ಸ್ವಾಗತಿಸಿದರು. ಉಪಾಧ್ಯಕ್ಷ ಕಿರಣ್ ಹೆಗ್ಡೆ ಅನಂತಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದೇವದಾಸ ಶೆಟ್ಟಿ ಬಂಟ್ವಾಳ, ಬಾಲಕೃಷ್ಣ ಶೆಟ್ಟಿ ಕೊಡಾಜೆ, ಮಲ್ಲಿಕಾ ಶೆಟ್ಟಿ ಸಿದ್ಧಕಟ್ಟೆ ಕಾರ್‍ಯಕ್ರಮ ನಿರೂಪಿಸಿದರು. ಕಟ್ಟಡ ನಿರ್ಮಾಣ ಸಮಿತಿ ಕಾರ್ಯದರ್ಶಿ ಶಶಿರಾಜ್ ಶೆಟ್ಟಿ ಕೊಳಂಬೆ ವಂದಿಸಿದರು.

Highslide for Wordpress Plugin