ನಾವಿಂದು ಎಲ್ಲೋ ಕೆಲವರನ್ನು ಮಾತ್ರ ದೇಶಭಕ್ತನೆಂದು ಸಂಬೋಧಿಸುತ್ತೇವೆ. ನಮ್ಮ ಸಮಾಜವು ವ್ಯಕ್ತಿಪೂಜಕವಾಗಿ ಹೋಗಿದೆ. ಒಂದೋ ಅವನು ತನ್ನನ್ನೇ ಪೂಜಿಸುತ್ತಾನೆ ಅಥವಾ ಬೇರೆ ವ್ಯಕ್ತಿಯನ್ನು ಪೂಜಿಸುತ್ತಾನೆ. ಇಂದು ವ್ಯಕ್ತಿ ನಿರಪೇಕ್ಷ ರಾಷ್ಟ್ರದ ಭಾವನೆ ಸಮಾಜದಲ್ಲಿಲ್ಲ. ವಾಸ್ತವದಲ್ಲಿ, ವ್ಯಕ್ತಿನಿರಪೇಕ್ಷ ಪರಿಪೂರ್ಣವಾದ ರಾಷ್ಟ್ರಶ್ರದ್ಧೆಯ ಭಾವನೆ ಚಿರಂತನವಾಗಿ, ಪೀಳಿಗೆಯಿಂದ ಪೀಳಿಗೆಗೆ ಅದು ವರ್ಧಿಸಲಿ ಎನ್ನುವ ರಾಷ್ಟ್ರ ಪ್ರೇಮದ ಗಂಗೆಯನ್ನು ಪ್ರವಹಿಸುವಂತೆ ಮಾಡುವ ವ್ಯವಸ್ಥೆಯು ಬೇರೆ ಯಾವ ಕಾರ್ಯವಿಧಾನದಲ್ಲೂ ಇಲ್ಲ. ಅದರತ್ತ ಯಾರ ಗಮನವೂ ಇಲ್ಲ. ತಾತ್ಕಾಲಿಕವಾದ ಸಣ್ಣ – ದೊಡ್ಡ ಸಮಸ್ಯೆಗಳು ಹಾಗೂ ಸ್ವಾರ್ಥಸಾಧನೆಯ ದಿಕ್ಕಿನಲ್ಲೇ ಎಲ್ಲರ ಗಮನವಿದೆ. ಕಾಲಕಾಲಕ್ಕೆ ನಮ್ಮ ದೇಶದಲ್ಲಿ ಮಹಾಪುರುಷರು ಜನಿಸಿದರು ಎಂಬುದು ಸತ್ಯ. ಅವರ ಕರ್ತೃತ್ವದಿಂದ ಸಮಾಜದಲ್ಲಿ ಚೈತನ್ಯ ಉಂಟಾಯಿತು. ಜನರು ಒಂದಾದರು. ಆದರೆ ಅವರ ಅಂತಃಕರಣದಲ್ಲಿ ಸ್ಫೂರ್ತಿಸೆಲೆಯಾಗಿ ಆ ಪ್ರಭಾವಶಾಲಿ ವ್ಯಕ್ತಿಯೇ ಇದ್ದರು. ಛತ್ರಪತಿ ಶಿವಾಜಿ ಆಗಿ ಹೋದರು, ಆ ಮಹಾಪುರುಷನ ಕರ್ತೃತ್ವದಿಂದ ರಾಷ್ಟ್ರದಲ್ಲಿ ತೇಜಸ್ವಿ ವಾತಾವರಣ ನಿರ್ಮಾಣವಾಯಿತು. ಅವರಿಂದ ನಿರ್ಮಾಣವಾದ ಈ ಭಾವನೆ ಸ್ವಲ್ಪ ಸಮಯ ಇತ್ತು. ಆದರೆ ಒಂದು ಪರಂಪರೆಯ ನಿರ್ಮಾಣವಾಗಲಿಲ್ಲ. ಆ ಪರಂಪರೆಯು ತುಂಡಾಯಿತು.
ನಮ್ಮ ರಾಷ್ಟ್ರದಲ್ಲಿ ಅನೇಕ ಅವತಾರಗಳಾದವು. ಆದರೆ ಇಂದು ಅವುಗಳದ್ದೇನು ಉಳಿದಿದೆ? ಅವರ ಹೆಸರಿನಲ್ಲಿ ಕೇವಲ ಹಬ್ಬ , ವ್ರತ, ಭಜನೆ, ಪೂಜೆ ಮಾತ್ರ ನಡೆಯುತ್ತದೆ. ಏಕೆಂದರೆ ವ್ಯಕ್ತಿನಿರಪೇಕ್ಷ ಕರ್ತವ್ಯ ಪರಾಯಣತೆಯ ಭಾವನೆಯ ಪ್ರಭಾವ ಮತ್ತು ಪರಂಪರೆ ನಿರ್ಮಾಣವಾಗಲಿಲ್ಲ. ಅಂತಹ ಪ್ರವಾಹವನ್ನು ನಿರ್ಮಿಸುವ, ಅದು ಚಿರಂತನವಾಗಿ ಪ್ರವಹಿಸುವಂತೆ ಮಾಡುವ ವ್ಯವಸ್ಥೆಯಾಗಲಿಲ್ಲ. ಬಹುಶಃ ಆ ಮಹಾಪುರುಷರಿಗೆ ಅಂತಹ ಕಾಲಾವಕಾಶ ಸಿಕ್ಕಿರಲಿಕ್ಕಿಲ್ಲ. ನಿರ್ಮಾಣವಾಗಿದ್ದ ಪ್ರವಾಹವು ಬತ್ತಿಹೋಗಿರಲಿಕ್ಕೂ ಸಾಕು. ಪ್ರವಾಹ ನಿರ್ಮಾಣವಾಗಲಿಲ್ಲ ಅಥವಾ ಹೆಚ್ಚು ಸಮಯ ಉಳಿಯಲಿಲ್ಲ ಎಂಬುದಂತೂ ಸತ್ಯ. ಲೋಕಮಾನ್ಯ ತಿಲಕರ ಉದಾಹರಣೆಯಂತೂ ಬಹಳ ನಿಕಟವಾದದ್ದು. ಅವರಿದ್ದಾಗ ಅಸಂಖ್ಯ ಜನರು ಅವರ ಹತ್ತಿರ ಸೇರುತ್ತಿದ್ದರು ಆದರೆ ಅವರು ಮಾಡಿದ ಕಾರ್ಯ ಅವರೊಂದಿಗೆ ಸಮಾಪ್ತವಾಯಿತು. ಗಾಂಧೀಜಿಯದಂತೂ ಅವರ ಮೃತ್ಯುವಿನ ಮೊದಲೇ ಸರ್ವನಾಶವಾಯಿತು. ಇವತ್ತು ಅವರ ಜಯಜಯಕಾರವಾಗುತ್ತಿರಬಹುದು. ವೇಷಭೂಷಣದಲ್ಲಿ ಅವರ ಬಾಹ್ಯಾನುಕರಣೆ ಆಗುತ್ತಿರಬಹುದು, ಆದರೆ ಅದರಲ್ಲಿ ಪರಂಪರೆಯ ಸೂತ್ರವಿಲ್ಲ. ರಾಷ್ಟ್ರಭಕ್ತಿಯ ಗಂಗೆಯು, ಪರಂಪರೆಯ ನಿರ್ಮಾಣವಾಗದೆ ಇದ್ದ ಕಾರಣದಿಂದ ಬತ್ತಿಹೋಯಿತು ಹಾಗೂ ಆ ಭಾವನೆಯ ಅಭಾವದಿಂದಾಗಿ ದೇಶದ ಮೇಲೆ ಅನೇಕ ಆಪತ್ತುಗಳು ಎರಗಿದವು. ಇದು ನಮ್ಮ ಇತಿಹಾಸದ ಅನುಭವ. ಸಾವಿರ ವರ್ಷಗಳ ಇತಿಹಾಸದ ನಿರ್ಣಯವೇನೆಂದರೆ – ಕಾಕಾಲಕ್ಕೆ ಯಾರೋ ಒಬ್ಬ ವ್ಯಕ್ತಿಯಲ್ಲಿ ರಾಷ್ಟ್ರಭಕ್ತಿಯ ಭಾವನೆ ಜಾಗೃತವಾಯಿತು. ಆ ವ್ಯಕ್ತಿಯ ಪ್ರಭಾವದಿಂದ – ವ್ಯಕ್ತಿ ನಿರಪೇಕ್ಷ ದೇಶಪ್ರೇಮದಿಂದ ಅಲ್ಲ – ಜನರು ಒಟ್ಟಾದರು, ಅವರು ಕೆಲಸ ಮಾಡಿದರು. ಆ ವ್ಯಕ್ತಿಯ ಅನಂತರ ಅಷ್ಟೇ ಪ್ರಭಾವವುಳ್ಳ ವ್ಯಕ್ತಿ ಯೊಬ್ಬ ಬಂದರೆ ಕಾರ್ಯವು ಸಾಗುತ್ತಿತ್ತು ಇಲ್ಲವಾದರೆ ಇಲ್ಲ. ಆದ್ದರಿಂದ ನಮ್ಮ ಗಮನವು ಭಾರತೀಯ ರಾಷ್ಟ್ರವು ಚಿರಂತನ, ತೇಜಸ್ವಿ, ವೈಭವಶಾಲಿ ಹಾಗೂ ಐಶ್ವರ್ಯ ಸಂಪನ್ನವಾಗಲು ಪರಂಪರೆಯ ಪ್ರವಾಹವನ್ನು ಉತ್ಪನ್ನ ಮಾಡುವ ದಿಕ್ಕಿನಲ್ಲಿ ಇರಲೇಬೇಕು. ಇದು ರಾಷ್ಟ್ರದ ಸಂಪೂರ್ಣ ಜೀವನದ ಮೂಲಭೂತ ಅವಶ್ಯಕತೆ.
ಈ ಒಂದು ವಿಷಯ ನಮ್ಮ ಹೃದಯದಲ್ಲಿ ಚೆನ್ನಾಗಿ ಕೂತರೆ, ಆಗಾಗ ಹುಟ್ಟುವ ಚಿಕ್ಕ ಚಿಕ್ಕ ಪ್ರಶ್ನೆಗಳಿಂದ ವ್ಯಥೆಯಾಗುವುದಿಲ್ಲ. ‘ವ್ಯಕ್ತಿ ನಿರಪೇಕ್ಷ ರಾಷ್ಟ್ರಪ್ರೇಮದ, ರಾಷ್ಟ್ರದ ಚಿರಂತನ ಕಲ್ಯಾಣಕ್ಕೋಸ್ಕರ, ಅತ್ಯಂತ ಅವಶ್ಯಕವಾದ ಪರಂಪರೆಯನ್ನು ನಿರ್ಮಾಣ ಮಾಡುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಹಾಗೂ ಇತಿಹಾಸದಲ್ಲಿ ಯಾರೂ ಮಾಡದಿರುವ, ಮಾಡಿದ್ದರೂ ಅವರಿಗೆ ಸಫಲತೆ ಸಿಗದ ಒಂದು ಮಹಾನ್ ಕಾರ್ಯವನ್ನು ಸಾಧಿಸಲು ನಾವು ಪರಿಶ್ರಮಿಸುತ್ತಿದ್ದೇವೆ’ ಎಂದು ನಮ್ಮ ಅಂತಃಕರಣದಲ್ಲಿ ಶ್ರದ್ಧೆ ಇರುತ್ತದೆ. ಈ ಕಾರ್ಯವು ಇಲ್ಲಿಯವರೆಗೆ ಸಾಧ್ಯವಾಗಲಿಲ್ಲ, ಆದರೆ ಆಗಲೇಬೇಕಾಗಿದೆ. ಈ ರೀತಿಯ ಸಮಾಜವು ನಿರ್ಮಾಣವಾದಾಗ ರಾಷ್ಟ್ರದ ಎದುರು ಸಮಸ್ಯೆಗಳು ಉಳಿಯುವುದಿಲ್ಲ. ಇದೊಂದೇ ಲಕ್ಷ್ಯವನ್ನು ಇಟ್ಟುಕೊಂಡ ಜನರು ಭಾರತದ ತುಂಬ ಎಲ್ಲ ಸ್ಥಾನಗಳಲ್ಲಿದ್ದರೆ ಹಾಗೂ ಅವರು ತಮ್ಮ ಸ್ನೇಹಪೂರ್ಣ ಆಚರಣೆಯ ಮೂಲಕ ಒಂದು ಆದರ್ಶವನ್ನು ನಿರ್ಮಾಣ ಮಾಡಿದರೆ, ಆಗ ಮಾತ್ರ ಈ ಗಂಗೆಯ ನಿರ್ಮಾಣ ಸಾಧ್ಯ. ಆಗ ರಾಷ್ಟ್ರದ ಅಮರತೆಯನ್ನು ಸಾಧಿಸಬಹುದು. ಈ ದೃಢವಾದ ಭಾವನೆಯು ನಮ್ಮ ಅಂತಃಕರಣದಲ್ಲಿ ಎಂದೆಂದೂ ಇರಬೇಕು. ‘ನಾನು ನನ್ನ ಸಾಮರ್ಥ್ಯದ ಕಣಕಣವನ್ನೂ ಸಮರ್ಪಿಸಿ ಅಂತಃಸ್ಫೂರ್ತಿಯಿಂದ ಜೀವನದಲ್ಲಿ ಪರಿವರ್ತನೆ ತರುವೆನು. ಹಾಗೂ ಸಮಾಜದೆದುರು, ವೈಯಕ್ತಿಕ ಜೀವನದಲ್ಲಿ ಸಂಸ್ಕೃತಿಗೆ ತಕ್ಕ ಒಂದು ಆದರ್ಶವನ್ನು ನಿರ್ಮಾಣಮಾಡುವೆನು. ಅದರ ಬಗ್ಗೆ ಗರ್ವಪಡುವುದಿಲ್ಲ’ ಎಂಬ ನಿಷ್ಠೆಯಿಂದ ನಾವು ಕಾರ್ಯಪ್ರವೃತ್ತರಾಗಬೇಕು.